ರಾಂಚಿ, ಏ. 1: ಜಾರ್ಖಂಡ್ ನ ಸಾಹೇಬ್ ಗಂಜ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಎರಡು ಗೂಡ್ಸ್ ರೈಲುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎನ್‌ಟಿಪಿಸಿ ನಿರ್ವಹಿಸುತ್ತಿರುವ ಎರಡು ರೈಲುಗಳ ನಡುವಿನ ಡಿಕ್ಕಿಯು ಬರ್ಹೈತ್ ಪೊಲೀಸ್ ಠಾಣೆ ಪ್ರದೇಶದ ಭೋಗ್ದಾಡಿಹ್ ಬಳಿ ಮುಂಜಾನೆ 3 ಗಂಟೆ ಸುಮಾರಿಗೆ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ. ಅಪಘಾತ ಸಂಭವಿಸಿದ ಹಳಿಗಳು ಎನ್‌ಟಿಪಿಸಿಯ ಒಡೆತನದಲ್ಲಿದೆ ಮತ್ತು ಮುಖ್ಯವಾಗಿ ಅದರ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲನ್ನು ಸಾಗಿಸಲು ಬಳಸಲಾಗುತ್ತದೆ.
ಧರ್ಮಲ್ ಪವರ್ ಸ್ಟೇಷನ್ ಅನ್ನು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಫರಕ್ಕಾ ವಿದ್ಯುತ್ ಎರಡೂ ಸರಕು ರೈಲುಗಳ ಚಾಲಕರು ಮುಖಾಮುಖಿ ಡಿಕ್ಕಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಸಾಹೇಬ್ ಗಂಜ್‌ನ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಕಿಶೋರ್ ಟಿರ್ಕಿ ಪಿಟಿಐಗೆ ತಿಳಿಸಿದ್ದಾರೆ.
ಪೂರ್ವ ರೈಲ್ವೆ ವಕ್ತಾರ ಕೌಶಿಕ್ ಮಿತ್ರಾ ಮಾತನಾಡಿ, ಸರಕು ರೈಲುಗಳು ಮತ್ತು ಹಳಿ ಎರಡೂ ಎನ್ಸಿಪಿಸಿಗೆ ಸೇರಿವೆ. ಇದಕ್ಕೂ ಭಾರತೀಯ ರೈಲ್ವೆಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಅಪಘಾತ ಸಂಭವಿಸಿದ ಮಾರ್ಗವು ಬಿಹಾರದ ಭಾಗಲ್ಪುರ ಜಿಲ್ಲೆಯ ಎನ್‌ಟಿಪಿಸಿಯ ಕಹಲ್ಲಾಂವ್ ಸೂಪರ್ ಸ್ಥಾವರಕ್ಕೆ ಸಂಪರ್ಕಿಸುತ್ತದೆ.