Monday, December 23, 2024
Homeರಾಷ್ಟ್ರೀಯ | Nationalಮೂವರು ಖಲಿಸ್ತಾನಿ ಉಗ್ರರ ಎನ್‌ಕೌಂಟರ್​

ಮೂವರು ಖಲಿಸ್ತಾನಿ ಉಗ್ರರ ಎನ್‌ಕೌಂಟರ್​

3 Khalistani terrorists, who attacked Punjab Police post, killed in UP encounter

ಲಕ್ನೋ,ಡಿ.23- ಪಂಜಾಬ್ನ ಗುರುದಾಸ್ಪುರದ ಪೊಲೀಸ್ ಪೋಸ್ಟ್ ಮೇಲೆ ಗ್ರೆನೇಡ್ ದಾಳಿ ನಡೆಸಿದ ಆರೋಪಿಗಳೆಂದು ಗುರುತಿಸಲಾಗಿದ್ದ ಮೂವರು ಖಲಿಸ್ತಾನಿ ಉಗ್ರರನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡಲಾಗಿದೆ.

ಮೂವರು ಅಪರಾಧಿಗಳು ಮತ್ತು ಉತ್ತರ ಪ್ರದೇಶ ಮತ್ತು ಪಂಜಾಬ್ ಪೊಲೀಸರ ಜಂಟಿ ತಂಡಗಳ ನಡುವೆ ನಿನ್ನೆ ರಾತ್ರಿ ಗುಂಡಿನ ಚಕಮಕಿ ನಡೆದಿದೆ. ಪೊಲೀಸರು ಅವರನ್ನು ಬಂಧಿಸಲು ಪ್ರಯತ್ನಿಸಿದರು, ಆದರೆ ಅಪರಾಧಿಗಳು ಗುಂಡು ಹಾರಿಸಿದಾಗ ಪ್ರತಿ ದಾಳಿ ನಡೆಸಿ ಅವರನ್ನು ಹತ್ಯೆ ಮಾಡಲಾಗಿದೆ.

ಎನ್ಕೌಂಟರ್ನಲ್ಲಿ ಬಲಿಯಾದವರನ್ನು ಗುರ್ವಿಂದರ್ ಸಿಂಗ್, ವೀರೇಂದ್ರ ಸಿಂಗ್ ಮತ್ತು ಜಸನ್ಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ.ಅವರ ಬಳಿ ಇದ್ದ ಎಕೆ ಸರಣಿಯ ಎರಡು ರೈಫಲ್ಗಳು ಮತ್ತು ಗ್ಲಾಕ್ ಪಿಸ್ತೂಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಮೂವರು ಪಾಕಿಸ್ತಾನ ಪ್ರಾಯೋಜಿತ ಖಲಿಸ್ತಾನ್ ಜಿಂದಾಬಾದ್ ಫೋರ್ಸ್ನ ಭಾಗವಾಗಿದ್ದಾರೆ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ. ಈ ಭಯೋತ್ಪಾದನಾ ಘಟಕವು ಪಂಜಾಬ್ನ ಗಡಿ ಪ್ರದೇಶಗಳಲ್ಲಿನ ಪೊಲೀಸ್ ಸಂಸ್ಥೆಗಳ ಮೇಲೆ ಗ್ರೆನೇಡ್ ದಾಳಿಯಲ್ಲಿ ತೊಡಗಿದೆ.

ಪಿಲಿಭಿತ್ ಮತ್ತು ಪಂಜಾಬ್ನ ಜಂಟಿ ಪೊಲೀಸ್ ತಂಡಗಳ ನಡುವೆ ಪಿಎಸ್ ಪುರನ್ಪುರ್, ಪಿಲಿಭಿತ್ ವ್ಯಾಪ್ತಿಯಲ್ಲಿ ಎನ್ಕೌಂಟರ್ ನಡೆದಿದೆ ಮತ್ತು ಮೂವರು ಘಟಕದ ಸದಸ್ಯರು ಭಾಗಿಯಾಗಿದ್ದಾರೆ. ಗುರುದಾಸ್ಪುರದ ಪೊಲೀಸ್ ಪೋಸ್ಟ್ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದರು ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ಎಕ್‌್ಸನಲ್ಲಿ ಪೋಸ್ಟ್ ಮಾಡಿದ್ದಾರೆ.

RELATED ARTICLES

Latest News