ಜೈಪುರ,ಜು.11– ಕಳೆದ 2021ನಲ್ಲಿ ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣೆ ಪಡೆಯ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿಸಲಾಗಿರುವ ಕಿಂಗ್‌ಪಿಂಗ್‌ನ ಬಾಬುಲಾಲ್ ಕಟಾರಾ ಅವರ ಸಹಚರ ಕುಂದನ್ ಕುಮಾರ್ ಪಾಂಡ್ಯ ಅವರ ಮಗಳು, ಸೋದರಳಿಯ ಮತ್ತು ಸೊಸೆಯನ್ನು ಬಂಧಿಸಲಾಗಿದೆ.
ಕಳೆದ 2021ರ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಕಟಾರಾ, ತನ್ನ ಸಹಚರ ಪಾಂಡ್ಯ ಅವರಿಗೆ ನೀಡಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಈ ಪ್ರಶ್ನೆ ಪತ್ರಿಕೆಗಳನ್ನು ತಮ್ಮ ಮಗಳು ರಿದ್ದಿ, ಸೋದರಳಿಯ ನೈತಿಕ್ ಮತ್ತು ಸೊಸೆ ನೇಹಾ ಅವರಿಗೆ ನೀಡಿದ್ದರು. ಮೂವರೂ ಪತ್ರಿಕೆಯನ್ನು ಪಡೆದ ನಂತರ ಪರೀಕ್ಷೆ ಬರೆದು ಉತ್ತೀರ್ಣರಾದರು, ಆದರೆ ಅವರು ದೈಹಿಕ ಪರೀಕ್ಷೆಯಲ್ಲಿ ವಿಫಲರಾಗಿದ್ದರು.
ನೇಮಕಾತಿ-ಪರೀಕ್ಷೆಯ ಸೋರಿಕೆ ಬಹಿರಂಗಗೊಂಡ ನಂತರ ತನಿಖಾ ತಂಡವನ್ನು ರಚಿಸಲಾಗಿತ್ತು ಎಂದು ಹೆಚ್ಚುವರಿ ಮಹಾನಿರ್ದೇಶಕ ವಿ.ಕೆ. ಸಿಂಗ್ ಹೇಳಿದ್ದಾರೆ.ಪ್ರಸ್ತುತ ಎಸ್‌ಒಜಿ ತಂಡವು ಸ್ವೀಕರಿಸಿದ ಮಾಹಿತಿಯ ಆಧಾರದ ಮೇಲೆ ಕಟಾರಾ ಅವರ ಸಹಚರನ ಮಗಳು, ಸೋದರಳಿಯ ಮತ್ತು ಸೊಸೆಯನ್ನು ಬಂಧಿಸಲಾಗಿದೆ.
- ಕೇಸರಿ ಶಾಲು ಧರಿಸಿದ್ದ ಟ್ರಾವಲ್ಸ್ ಕಾರ್ಮಿಕ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಮೂವರು ಕಿಡಿಗೇಡಿಗಳ ಸೆರೆ
- ರೌಡಿ ಬಿಕ್ಲುಶಿವ ಕೊಲೆಯ ಪ್ರಮುಖ ಆರೋಪಿ ಜಗ್ಗಿ ಅರೆಸ್ಟ್
- ಆರ್ಎಸ್ಎಸ್ನ ಪ್ರಾರ್ಥನೆ ಮಾಡಿದ್ದಕ್ಕೆ ಕ್ಷಮೆಯಾಚಿಸಿದ ಡಿಸಿಎಂ ಡಿಕೆಶಿ
- “ಟೆಸ್ಟ್ ಕ್ರಿಕೆಟ್ನಿಂದ ಕೊಹ್ಲಿ ನಿವೃತ್ತಿ ನಿರ್ಧಾರದ ಹಿಂದೆ ಏನೋ ಅಸಾಮಾನ್ಯ ಇರಬಹುದು”
- ಬೆಂಗಳೂರಲ್ಲಿ ಇನ್ನು ಮುಂದೆ ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಊಟ ಹಾಕುವಂತಿಲ್ಲ