Monday, July 28, 2025
Homeರಾಷ್ಟ್ರೀಯ | Nationalರಾಜಸ್ಥಾನದಲ್ಲಿ ಶಾಲಾ ಕಟ್ಟಡ ಕುಸಿದು ನಾಲ್ವರು ವಿದ್ಯಾರ್ಥಿಗಳು ಸಾವು

ರಾಜಸ್ಥಾನದಲ್ಲಿ ಶಾಲಾ ಕಟ್ಟಡ ಕುಸಿದು ನಾಲ್ವರು ವಿದ್ಯಾರ್ಥಿಗಳು ಸಾವು

4 Children Killed, 17 Injured As School Building Roof Collapses In Rajasthan's Jhalawar

ಜಲಾವರ್‌,ಜು.25-ಸರ್ಕಾರಿ ಶಾಲಾ ಕಟ್ಟಡ ಕುಸಿದು ನಾಲ್ವರು ಮಕ್ಕಳು ಸಾವನ್ನಪ್ಪಿ, 17 ಮಂದಿ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ರಾಜಸ್ಥಾನದ ಜಲಾವರ್‌ ಜಿಲ್ಲೆಯಲ್ಲಿ ನಡೆದಿದೆ.ಜಿಲ್ಲೆಯ ಮನೋಹರ್ಥಾನ ಬ್ಲಾಕ್‌ನ ಪೀಪ್ಲೋಡಿ ಸರ್ಕಾರಿ ಶಾಲೆಯಲ್ಲಿ ಮಕ್ಕಳು ತರಗತಿಗಳಿಗೆ ಹಾಜರಾಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ಕು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡ ಹತ್ತು ಮಕ್ಕಳನ್ನು ಜಲಾವರ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ .ಅವರಲ್ಲಿ ನಾಲ್ವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಜಲಾವರ್‌ನ ಪೊಲೀಸ್‌‍ ವರಿಷ್ಠಾಧಿಕಾರಿ ಅಮಿತ್‌ ಕುಮಾರ್‌ ತಿಳಿಸಿದ್ದಾರೆ.

ಶಿಕ್ಷಕರು ಮತ್ತು ಗ್ರಾಮಸ್ಥರ ಸಹಾಯದಿಂದ ಮಕ್ಕಳನ್ನು ಅವಶೇಷಗಳಿಂದ ಹೊರತೆಗೆದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಯಲ್ಲಿ ಕೆಲ ಶಿಕ್ಷಕರು ಹಾಗು ಸಿಬ್ಬಂಧಿ ಗಾಯಗೊಂಡಿದ್ದು ಅವರನ್ನು ಕೂಡ ಆಸ್ಪತ್ರೆಗೆ ಸಾಗಿಸಲಾಗಿದೆ.

ಶಾಲೆ ಪ್ರವೇಶದ ಭಾಗ ಸಂಪೂರ್ಣ ನೆಲಕಚ್ಚಿದೆ. ಬೆಳಿಗೆ ಮಕ್ಕಳು ಶಾಲೆ ಒಳಗೆ ಬರುವಾಗ ಏಕಾಏಕಿ ಕಟ್ಟಡ ಕುಸಿದಿದೆ.ಸ್ಥಳಕ್ಕೆ ಆಗ್ನಿಶಾಮಕ ಸಿಬ್ಭಂದಿ ಹಾಗು ವಿಪತ್ತು ಪರಿಹಾರ ತಂಡ ದಾವಿಸಿ ಕಾರ್ಯಾಚರಣೆ ನಡೆಸಿದೆ.ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಶಾಲಾ ಕಟ್ಟಡ ಶಿಥಿಲಗೊಂಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಸುಮಾರು 60 ಕ್ಕೂ ಹೆಚ್ಚು ಮಕ್ಕಳು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು ಅವರನ್ನೆಲ್ಲಾ ಈಗ ಹೊರತೆಗೆಯಲಾಗಿದ್ದು,ಸ್ಥಳಕ್ಕೆ ವೈದ್ಯಕೀಯ ತಂಡವೂ ಆಗಮಿಸಿ ಗಾಯಗೊಂಡ ಮಕ್ಕಳಗೆ ಪ್ರಾಥಮಿಕ ಚಿಕಿತ್ಸೆ ನೀಡಿ ನಂತೆ ಆಂಬುಲೆನ್‌್ಸ ಮೂಲಕ ಮನೋಹರ್ಥಾನ ಸಿಎಚ್‌ಸಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಗಿದೆ.

RELATED ARTICLES

Latest News