Monday, July 28, 2025
Homeರಾಷ್ಟ್ರೀಯ | Nationalಹಿಮಾಚಲ ಪ್ರದೇಶ : ಪಿಕಪ್‌ ವಾಹನ ಕಾಲುವೆಗೆ ಉರುಳಿ ಬಿದ್ದು ನಾಲ್ವರು ಸಾವು

ಹಿಮಾಚಲ ಪ್ರದೇಶ : ಪಿಕಪ್‌ ವಾಹನ ಕಾಲುವೆಗೆ ಉರುಳಿ ಬಿದ್ದು ನಾಲ್ವರು ಸಾವು

4 dead, 5 missing after pick-up carrying pilgrims from Naina Devi falls into Sirhind canal near Ludhana

ಲುಧಿಯಾನ,ಜು.28– ಪಿಕಪ್‌ ವಾಹನವು ಕಾಲುವೆಗೆ ಉರಳಿ ನಾಲ್ವರು ಸಾವನ್ನಪ್ಪಿರುವ ಘಟನೆ ಪಂಜಾಬ್‌ನ ಲುಧಿಯಾನ ಜಿಲ್ಲೆಯ ಜಾಗೇರಾ ಸೇತುವೆ ಬಳಿ ನಡೆದಿದೆ.ಹಿಮಾಚಲ ಪ್ರದೇಶದ ಮಾತಾ ನೈನಾ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಹಿಂತಿರುಗುತ್ತಿದ್ದ ಸುಮಾರು 25 ಭಕ್ತರ ಗುಂಪು ವಾಪಸಾಗುವ ವೇಳೆ ರಾತ್ರಿ ಸಿರ್ಹಿಂದ್‌ ಕಾಲುವೆಗೆ ಬಿದ್ದ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರಲ್ಲಿ ಇಬ್ಬರು ಮಕ್ಕಳೂ ಸೇರಿದ್ದಾರೆ.ಕಾಲುವೆಯ ದಂಡೆಯಲ್ಲಿ ಮತ್ತೊಂದು ವಾಹನವನ್ನು ಹಿಂದಿಕ್ಕುವಾಗ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿ ಬಿದ್ದಿದೆ ಉಪ ಪೊಲೀಸ್‌‍ ಆಯುಕ್ತ ಹಿಮಾಂಶು ಜೈನ್‌ ಮತ್ತು ಹಿರಿಯ ಪೊಲೀಸ್‌‍ ವರಿಷ್ಠಾಧಿಕಾರಿ ಜ್ಯೋತಿ ಯಾದವ್‌ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು.

ಹೆಚ್ಚಿನ ಭಕ್ತರನ್ನು ರಕ್ಷಿಸಲಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಆದಾಗ್ಯೂ, ಅಧಿಕಾರಿಗಳ ಪ್ರಕಾರ, ಮೂವರು ಇನ್ನೂ ನಾಪತ್ತೆಯಾಗಿದ್ದಾರೆ.
ಈವರೆಗೆ ನಾಲ್ಕು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

RELATED ARTICLES

Latest News