ಗಾಜಿಯಾಬಾದ್,ಜ.19-ಮನೆಗೆ ಬೆಂಕಿ ಬಿದ್ದು ತಾಯಿ , ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಜೀವವಾಗಿ ದಹನಗೊಂಡಿರುವ ಘಟನೆ ಸುಟ್ಟು ಕರಕಲಾಗಿರುವ ಘಟನೆ ಲೋನಿ ಪ್ರದೇಶದ ಕಾಂಚನ್ ಪಾರ್ಕ್ ಬಳಿ ನಡೆದಿದೆ.
ಕಟ್ಟಡದ ಮೂರನೇ ಮಹಡಿಯಲ್ಲಿನ ಮನೆಯಲ್ಲಿ ಮುಂಜಾನೆ ಬೆಂಕಿ ಅವಘಡ ಸಂಭವಿಸಿದೆ ,ಸುಮಾರು 8 ಮಂದಿ ಮನೆಯಲ್ಲಿ ವಾಸಿಸುತ್ತಿದ್ದು,ಬೆಂಕಿ ಕಾಣಿಸಿಕೊಂಡಾಗ ಕುಟುಂಬ ಸದಸ್ಯರು ನಿದ್ರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಗುಲ್ಬಹರ್ (32) ಮತ್ತು ಅವರ ಇಬ್ಬರು ಅಪ್ರಾಪ್ತ ಪುತ್ರರು ಎಂದು ಗುರುತಿಸಲಾಗಿದೆ. ಅದೇ ಮನೆಯಲ್ಲಿ ವಾಸಿಸುತ್ತಿದ್ದ ಸಂಬಂಧಿಕರ ಮಗ ಕೂಡ ಸಾವನ್ನಪ್ಪಿದ್ದಾರೆ ಇತರ ಐದು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದರು.
ಬೆಂಕಿ ನಂದಿಸಿದ ನಂತರ, ಅಗ್ನಿಶಾಮಕ ದಳದವರು ಮನೆಯೊಳಗೆ ತಪಾಸಣೆ ನಡೆಸಿದಾಗ ಶವ ಪತ್ತೆಯಾಗಿದೆ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ರಾಹುಲ್ ತಿಳಿಸಿದ್ದಾರೆ. ಆ ಮಹಿಳೆಯ ಪತಿ ಶಹನವಾಜ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ನಾಲ್ವರು ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಸ್ಥಿತಿ ಸ್ಥಿರವಾಗಿದೆ. ರಾತ್ರಿ ವೇಳೆ ಬೆಂಕಿ ಕಾಣಿಸಿಕೊಂಡ ಕಾರಣ, ಕುಟುಂಬ ಸದಸ್ಯರಿಗೆ ಬೆಂಕಿಯ ಸುಳಿವು ಸಕಾಲದಲ್ಲಿ ಸಿಗಲಿಲ್ಲ ಎನ್ನಲಾಗಿದೆ .ಪ್ರಸ್ತುತ ಬೆಂಕಿಯ ಕಾರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಘಟನೆ ಈ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ.