Tuesday, September 17, 2024
Homeರಾಜ್ಯಅಕ್ರಮವಾಗಿ ಮರಗಳನ್ನು ಕಡಿದಿರುವ ಪ್ರಕರಣದ ವಿಚಾರಣೆಗೆ 4 ತಿಂಗಳ ಗಡುವು

ಅಕ್ರಮವಾಗಿ ಮರಗಳನ್ನು ಕಡಿದಿರುವ ಪ್ರಕರಣದ ವಿಚಾರಣೆಗೆ 4 ತಿಂಗಳ ಗಡುವು

ಬೆಂಗಳೂರು, ಜು.12- ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮಾಗೇರಿ ಗ್ರಾಮದ ಹಿಡುವಳಿ ಪ್ರದೇಶದಲ್ಲಿ ಅನುಮತಿ ನೀಡದ ಸರ್ವೆ ನಂಬರ್‌ಗಳಲ್ಲಿ ಅಕ್ರಮವಾಗಿ ಮರಗಳನ್ನು ಕಡಿದಿರುವ ಆರೋಪ ಪ್ರಕರಣದ ಮಂಡನಾಧಿಕಾರಿಯಾಗಿ ಹಾಸನ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ನು ನೇಮಿಲಾಗಿದೆ.

ಈ ಪ್ರಕರಣದ ವಿಚಾರಣಾ ಪ್ರಕ್ರಿಯೆಯನ್ನು ನಾಲ್ಕು ತಿಂಗಳ ಕಾಲ ಮಿತಿಯೊಳಗೆ ಪೂರ್ಣಗೊಳಿಸಿ ವಿಚಾರಣಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಅರಣ್ಯ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಕಳೆದ 2023ರ ಸೆ.12ರಂದು ಹೊರಡಿಸಿದ್ದ ಆದೇಶದಲ್ಲಿ ಸಾಮಾಜಿಕ ಅರಣ್ಯ ಬೆಂಗಳೂರು ನಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ನು ಮರಗಳನ್ನು ಕಡಿದ ಪ್ರಕರಣದ ಮಂಡನಾಧಿಕಾರಿಯನ್ನಾಗಿ ಮಾಡಲಾಗಿತ್ತು. ಈಗ ಮಂಡನಾಧಿಕಾರಿಯನ್ನು ಬದಲಿಸಿದ್ದು, ಹಾಸನ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ವಿಚಾರಣೆ ಹೊಣೆಗಾರಿಕೆಯನ್ನು ವಹಿಸಲಾಗಿದೆ.

ಮರಗಳನ್ನು ಅನುಮತಿ ಇಲ್ಲದೆ ಕಡಿದಿರುವ ಆರೋಪಕ್ಕೆ ಸಂಬಂಧಿಸಿದಂತೆ ಹಿಂದಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಸಿ.ಲಿಂಗರಾಜ, ಅಂದಿನ ವಲಯ ಅರಣಾಧಿಕಾರಿ ಸಿ.ಅಭಿಲಾಷ್‌ ಮತ್ತು ವಲಯ ಅರಣ್ಯಾಧಿಕಾರಿ (ಕಡ್ಡಾಯ ನಿವೃತ್ತಿ) ಹೆಚ್‌.ಕೆ.ಮರಿಸ್ವಾಮಿ ಅವರ ವಿರುದ್ಧ 1957ರ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 13ರ ಅನ್ವಯ ಜಂಟಿ ಇಲಾಖಾ ವಿಚಾರಣೆ ಜರುಗಿಸಲು 2023ರ ಸೆ.12ರಂದು ಆದೇಶಿಸಲಾಗಿತ್ತು.

RELATED ARTICLES

Latest News