Saturday, October 5, 2024
Homeರಾಜ್ಯ4 ಸಾವಿರ ಕೋಟಿ ಭ್ರಷ್ಟಾಚಾರ : ತಕ್ಷಣ ಸಿಎಂ ರಾಜೀನಾಮೆಗೆ ಆರ್‌.ಅಶೋಕ್‌ ಒತ್ತಾಯ

4 ಸಾವಿರ ಕೋಟಿ ಭ್ರಷ್ಟಾಚಾರ : ತಕ್ಷಣ ಸಿಎಂ ರಾಜೀನಾಮೆಗೆ ಆರ್‌.ಅಶೋಕ್‌ ಒತ್ತಾಯ

ಬೆಂಗಳೂರು,ಜೂ.4- ಸಾವಿರಾರು ಬ್ರಹಾಂಡ ಭ್ರಷ್ಟಾಚಾರ ನಡೆದಿದೆ ಎನ್ನಲಾದ ಮೂಡಾ ಹಗರಣವನ್ನು ರಾಜ್ಯ ಸರ್ಕಾರ ಕೂಡಲೇ ಸಿಬಿಐ ತನಿಖೆಗೆ ವಹಿಸಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಶಕಗಳಲ್ಲಿ ಇದು ಬಹುದೊಡ್ಡ ಹಗರಣವಾಗಿದೆ. ಅಂದಾಜ 4 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಕೂಡಲೇ ಸಿಬಿಐಗೆ ವಹಿಸಬೇಕೆಂದು ಅವರು ಆಗ್ರಹಿಸಿದರು.

ಮೂಡಾ ಹಗರಣದಲ್ಲಿ ಬಿಜೆಪಿ, ಜೆಡಿಎಸ್‌‍ ಸೇರಿದಂತೆ ಯಾರೇ ಇದ್ದರೂ ಮುಖ್ಯಮಂತ್ರಿಗಳು ನಿರ್ದಾಕ್ಷಿಣ್ಯವಾಗಿ ಬಂಧಿಸಲಿ. ಅದಕ್ಕೆ ನಮದೇನು ತಕರಾರು ಇಲ್ಲ. ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಕುಟುಂಬದವರ ಹೆಸರೇ ಕೇಳಿಬರುತ್ತಿರುವುದರಿಂದ ನೈತಿಕವಾಗಿ ಅಧಿಕಾರದಲ್ಲಿ ಮುಂದುವರೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.

ಬಿಜೆಪಿ ಕಾಲದಲ್ಲಿ ಇದು ಹಗರಣವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಯಾರ ಕಾಲದಲ್ಲಿ ನಡೆದಿದ್ದರೂ ತನಿಖೆಯಾಗಬೇಕು. ಅಂದು ಮೂಡಾದಲ್ಲಿ ಆಯುಕ್ತರಾದವರು ಯಾರೆಂಬುದನ್ನು ಪತ್ತೆಹಚ್ಚಿ ಬಂಧಿಸಬೇಕಲ್ಲವೇ ಎಂದು ಅಶೋಕ್‌ ಸಿಎಂಗೆ ತಿರುಗೇಟು ನೀಡಿದರು.

86 ಸಾವಿರ ಜನರು ನಿವೇಶನ ಪಡೆಯಲು ಅರ್ಜಿ ಹಾಕಿದ್ದಾರೆ. ಅವರಿಗೆ ನಿವೇಶನವನ್ನೇ ಕೊಟ್ಟಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಮ ಕೂಡ ದೊಡ್ಡ ಫಲಾನುಭವಿಯಾಗಿದ್ದಾರೆ. ಒಮೆ ಜಮೀನನ್ನು ಸರ್ಕಾರ ಭೂ ಸ್ವಾಧೀನ ಮಾಡಿಕೊಂಡರೆ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಪಾರ್ವತಮಗೆ ನಿವೇಶನ ಬದಲಾಯಿಸಿ ಬೇರೊಂದು ಕಡೆ ನಿವೇಶನ ಕೊಡಲು ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.

50-50 ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡುವ ನಿಯಮವೇ ಕಾನೂನು ಬಾಹಿರ. ಬೆಂಗಳೂರಿನ ದಾಸರಹಳ್ಳಿಯಲ್ಲಿ ಭೂ ಸ್ವಾಧೀನ ಮಾಡಿಕೊಂಡರೆ ಎಂಜಿ ರಸ್ತೆಯಲ್ಲಿ ಬದಲಿ ನಿವೇಶನ ಕೊಟ್ಟಂತಾಗುತ್ತದೆ. ಮೂಡಾ ಅಧ್ಯಕ್ಷರೇ ಹಲವು ಬಾರಿ ಪತ್ರ ಬರೆದು ಇದು ಅಕ್ರಮ ಎಂದು ಹೇಳಿದ್ದಾರೆ.

ಆದರೆ ಇದರಲ್ಲಿ ಅನೇಕ ಪ್ರಭಾವಿಶಾಲಿಗಳು ಮತ್ತು ಮಧ್ಯವರ್ತಿಗಳು ಶಾಮೀಲಾಗಿದ್ದಾರೆ. ಈ ಪ್ರಕರಣವನ್ನು ನಾವು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವರೆಗೂ ಬಿಡುವುದಿಲ್ಲ ಎಂದು ಅಶೋಕ್‌ ಎಚ್ಚರಿಸಿದರು.

RELATED ARTICLES

Latest News