ಮನಿಲಾ, ಮೇ 4: ಮನಿಲಾ ವಿಮಾನ ನಿಲ್ದಾಣದ ಪ್ರವೇಶದ್ವಾರಕ್ಕೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ 4 ವರ್ಷದ ಬಾಲಕಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಫಿಲಿಪೈನ್ಸ್ ರೆಡ್ ಕ್ರಾಸ್ ಸಂಸ್ಥೆ ತಿಳಿಸಿದೆ.
ಇನ್ನೊಬ್ಬ ಬಲಿಪಶು ವಯಸ್ಕ ಪುರುಷ ಎಂದು ಮಾನವೀಯ ಗುಂಪು ಹೇಳಿಕೆಯಲ್ಲಿ ತಿಳಿಸಿದೆ. ಘಟನೆಯಲ್ಲಿ ಇತರ ಹಲವು ಜನರು ಗಾಯಗೊಂಡಿದ್ದಾರೆ ಮತ್ತು ವಾಹನದ ಚಾಲಕ ಪೊಲೀಸ್ ವಶದಲ್ಲಿದ್ದಾನೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ನಿನೋಯ್ ಅಶ್ವಿನೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವೇಶದ್ವಾರದ ಗೋಡೆಗೆ ಡಿಕ್ಕಿ ಹೊಡೆದ ಕಪ್ಪು ಎಸ್ ಯುವಿಯನ್ನು ಸುತ್ತುವರೆದಿದ್ದ ಡಜನ್ ಗಟ್ಟಲೆ ಸಿಬ್ಬಂದಿಗಳು ಚಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ನಂತರ ವಾಹನವನ್ನು ಸ್ಥಳದಿಂದ ತೆಗೆದುಹಾಕಲಾಯಿತು. ಘಟನೆಯ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ ಎಂದು ವಿಮಾನ ನಿಲ್ದಾಣದ ಆಪರೇಟರ್ ತಿಳಿಸಿದ್ದಾರೆ.
- ಉರುಗ್ವೆ ದೇಶದಲ್ಲಿ ದಯಾಮರಣಕ್ಕೆ ಅವಕಾಶ ನೀಡುವ ಕಾನೂನು ಅಂಗೀಕಾರ
- ಎಟಿಎಂನಿಂದ 6.18 ಲಕ್ಷ ರೂ. ಹಣ ಮಾಯ
- ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯಲ್ಲಿ ಭಾಗವಹಿಸಲು ಇನ್ಫೋಸಿಸ್ ನಾರಾಯಣಮೂರ್ತಿ ದಂಪತಿ ನಿರಾಕರಣೆ
- ಬೆಂಗಳೂರು ರಸ್ತೆಗುಂಡಿ, ಉದ್ಯಮಗಳ ಸ್ಥಳಾಂತರದ ಬಗ್ಗೆ ಆಂಧ್ರ ಸಚಿವ ನಾರಾ ಲೋಕೇಶ್ ಹೊಸ ಬಾಂಬ್..!
- 56 ಇಂಚಿನ ಮೋದಿ ಎದೆ ಕುಗ್ಗಿದೆ ; ಕಾಂಗ್ರೆಸ್ ಲೇವಡಿ