ನವದೆಹಲಿ,ಜು.16– ಜಮ್ಮು ಮತ್ತು ಕಾಶ್ಮೀರದಲ್ಲಿ ಕಣಿವೆಯಲ್ಲಿ ನಾಲ್ವರು ಯೋಧರು ಹುತಾತ್ಮರಾಗುವುದರೊಂದಿಗೆ ಕಳೆದ 32 ತಿಂಗಳಿನಲ್ಲಿ ಈ ಪ್ರದೇಶದಲ್ಲಿ ಉಗ್ರರು ನಡೆಸಿದ ಅಟ್ಟಹಾಸಕ್ಕೆ 48 ಮಂದಿ ಬಲಿಯಾಗಿದ್ದಾರೆ.ಜುಲೈ 8 ರಂದು ಕಥುವಾ ಜಿಲ್ಲೆಯಲ್ಲಿ ಸೇನಾ ಬೆಂಗಾವಲು ಪಡೆಯ ಮೇಲೆ ಭಯೋತ್ಪಾದಕರು ದಾಳಿ ಮಾಡಿದ ನಂತರ ಐವರು ಸೇನಾ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟರು ಮತ್ತು ಐವರು ಗಾಯಗೊಂಡಿದ್ದರು.
ಜೂನ್ 9 ರಂದು ರಿಯಾಸಿಯಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಯಾತ್ರಾರ್ಥಿಗಳಿಂದ ತುಂಬಿದ ಬಸ್ಸು ಕಮರಿಗೆ ಉರುಳಿದ ನಂತರ ಒಂಬತ್ತು ಜನರು ಸಾವನ್ನಪ್ಪಿದರು ಮತ್ತು 33 ಮಂದಿ ಗಾಯಗೊಂಡಿದ್ದರು.ಮೇ 4 ರಂದು ಪೂಂಚ್ ಜಿಲ್ಲೆಯಲ್ಲಿ ಐಎಎಫ್‌ನ ಒಂದು ಸೇರಿದಂತೆ ಎರಡು ವಾಹನಗಳು ಭಾರೀ ಭಯೋತ್ಪಾದಕರ ಗುಂಡಿನ ದಾಳಿಗೆ ಸಿಲುಕಿದಾಗ ಭಾರತೀಯ ವಾಯುಪಡೆಯ ಒಬ್ಬ ಯೋಧ ಹುತಾತರಾಗಿದ್ದರು.ಕಳೆದ ವರ್ಷದ ಡಿಸೆಂಬರ್ 21ರಂದು ನಡೆದ ಕಾರ್ಯಾಚರಣೆಯಲ್ಲಿ ನಾಲ್ವರು ಸೈನಿಕರು ಕೊಲ್ಲಲ್ಪಟ್ಟರು.
2023ರ ನವಂಬರ್ ತಿಂಗಳಿನಲ್ಲಿ ಇಬ್ಬರು ನಾಯಕರು ಸೇರಿದಂತೆ ಐವರು ಸೈನಿಕರು ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟರು.ಏಪ್ರಿಲ್ ಮತ್ತು ಮೇ ತಿಂಗಳ ಅವಳಿ ದಾಳಿಯಲ್ಲಿ 10 ಸೈನಿಕರು ಹುತಾತರಾಗಿದ್ದರು.2022ರ ಮೇ ತಿಂಗಳಿನಲ್ಲಿ ಕತ್ರಾದಲ್ಲಿ ಯಾತ್ರಿಕ ಬಸ್ ಮೇಲೆ ದಾಳಿ ನಡೆಸಿದ ನಂತರ ನಾಲ್ವರು ಕೊಲ್ಲಲ್ಪಟ್ಟರು. 2021ರ ಡಿಸಂಬರ್‌ನಲ್ಲಿ ನಡೆದ ಕಾರ್ಯಚರಣೆಯಲ್ಲಿ ನಾಲ್ವರು ಸೈನಿಕರು ಸಾವನ್ನಪ್ಪಿದ್ದರು.
ಹೆಚ್ಚುತ್ತಿರುವ ಭಯೋತ್ಪಾದಕ ಘಟನೆಗಳ ಮಧ್ಯೆ, ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಜಮು ಮತ್ತು ಕಾಶೀರದಲ್ಲಿನ ಪರಿಸ್ಥಿತಿಯನ್ನು ನಿರ್ಣಯಿಸಲು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಅವರು ಕೇಂದ್ರ ಗಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಕೇಂದ್ರಾಡಳಿತ ಪ್ರದೇಶದ ಭದ್ರತೆಗೆ ಸಂಬಂಧಿಸಿದ ಪರಿಸ್ಥಿತಿ ಮತ್ತು ಸಶಸ್ತ್ರ ಪಡೆಗಳು ಕೈಗೊಳ್ಳುತ್ತಿರುವ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ಸಂಪೂರ್ಣ ಅವಲೋಕನ ನಡೆಸಿದ್ದರು.
ಅವರು ಜಮು ಮತ್ತು ಕಾಶೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಸ್ಥಳೀಯ ಆಡಳಿತವು ಕೈಗೊಳ್ಳುತ್ತಿರುವ ಪ್ರಯತ್ನಗಳ ಬಗ್ಗೆ ವಿವರಿಸಿದರು.ಸಶಸ್ತ್ರ ಪಡೆಗಳ ಭಯೋತ್ಪಾದನಾ ನಿಗ್ರಹ ಸಾಮರ್ಥ್ಯಗಳ ಸಂಪೂರ್ಣ ಸ್ಪೆಕ್ಟ್ರಮ್ ಅನ್ನು ನಿಯೋಜಿಸಲು ಪ್ರಧಾನಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.