Saturday, June 7, 2025
Homeಕ್ರೀಡಾ ಸುದ್ದಿ | Sports2026ರ ಪುಟ್‌ಬಾಲ್‌ವಿಶ್ವಕಪ್‌ಗೆ ಅರ್ಹತೆ ಪಡೆದ 48 ತಂಡಗಳು

2026ರ ಪುಟ್‌ಬಾಲ್‌ವಿಶ್ವಕಪ್‌ಗೆ ಅರ್ಹತೆ ಪಡೆದ 48 ತಂಡಗಳು

South Korea and Jordan qualify for expanded 2026 World Cup as 48-team field continues to take shape ahead of tournament in United States, Mexico and Canada

ಲಂಡನ್, ಜೂನ್.6-ಮುಂದಿನ 2026ಕ್ಕೆ ನಡೆಯಲಿರುವ ವಿಶ್ವಕಪ್ ಪುಟ್‌ಬಾಲ್ ಪಂದ್ಯಾವಳಿಗೆ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ಜಂಟಿಯಾಗಿ ಆತಿಥ್ಯವಹಿಸಲಿದ್ದು,ದಾಖಲೆಯ 48 ತಂಡಗಳು ಭಾಗವಹಿಸಲಿವೆ. ಕೊನೆಯದ್ದಾಗಿ ಉಜ್ಜಿಕಿಸ್ತಾನ್, ಜೋರ್ಡಾನ್ ಮತ್ತು ದಕ್ಷಿಣ ಕೊರಿಯಾ ಅರ್ಹತೆ ಪಡೆದಿದೆ.

ನಲವತ್ತೂರು ದೇಶದ ತಂಡಗಳು ಅರ್ಹತಾ ಪ್ರಕ್ರಿಯೆಯ ಮೂಲಕ ತಮ್ಮ ಸ್ಥಾನಗಳನ್ನು ಪಡೆಯುತ್ತವೆ. ಆರು ತಂಡಗಳನ್ನು ಅಂತರರಾಷ್ಟ್ರೀಯ ಪ್ಲೇಆಫ್‌ಗಳಲ್ಲಿ ಇನ್ನೆರಡು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತವೆ ಮೂರು ಆತಿಥೇಯ ದೇಶಗಳು ಸ್ವಯಂಚಾಲಿತವಾಗಿ ಅರ್ಹತೆ ಪಡೆಯುತ್ತವೆ.

ಏಷ್ಯಾದ ಎಂಟು ಮತ್ತು ಇಂಟರ್‌ಕಾಂಟಿನೆಂಟಲ್‌ನಲ್ಲಿ ಪ್ಲೇಆಫ್‌ನಲ್ಲಿ ಒಂದು ಸ್ಥಾನಗಳನ್ನು ಹೊಂದಿರುತ್ತದೆ. ಆಫ್ರಿಕಾ ಖಾಂಡದಿಂದ ಒಂಬತ್ತು ನೇರ ಸ್ಥಾನಗಳನ್ನು ಹೊಂದಿದೆ ಜೊತೆಗೆ ಇಂಟರ್‌ಕಾಂಟಿನೆಂಟಲ್ ಪ್ಲೇಆಫ್‌ಗೆ ಒಂದು ಸ್ಥಾನ ಹೊಂದಿದೆ. ಉತ್ತರ ಮತ್ತು ಮಧ್ಯ ಅಮೆರಿಕ ಮತ್ತು ಕೆರಿಬಿಯನ್ ಮೂರು ನೇರ ಸ್ಥಾನಗಳನ್ನು ಮತ್ತು ಇಂಟರ್‌ಕಾಂಟಿನೆಂಟಲ್ ಪ್ಲೇಆಫ್‌ಗಳಲ್ಲಿ ಮತ್ತೆರಡು ಸ್ಥಾನಗಳನ್ನು ಪಡೆಯುತ್ತವೆ.

ದಕ್ಷಿಣ ಅಮೆರಿಕಾ ಆರು ನೇರ ಸ್ಥಾನಗಳನ್ನು ಹೊಂದಿದ್ದು, ಇನ್ನೊಂದು ತಂಡವನ್ನು ಇಂಟರ್‌ಕಾಂಟಿನೆಂಟಲ್ ಪ್ಲೇಆಫ್‌ಗೆ ಕಳುಹಿಸುತ್ತದೆ. ನ್ಯೂಜಿಲೆಂಡ್ ಜೊತೆಗೆ ಮುಂದಿನ ವಿಶ್ವಕಪ್‌ನಲ್ಲಿ ಯುರೋಪ್‌ನಲ್ಲಿ 16 ತಂಡಗಳು ಖಚಿತವಾಗಿ ಆಡಲಿವೆ.

RELATED ARTICLES

Latest News