Thursday, December 5, 2024
Homeರಾಷ್ಟ್ರೀಯ | Nationalಥಾಣೆ : ಅಕ್ರಮವಾಗಿ ತಂಗಿದ್ದ ಐವರು ಬಾಂಗ್ಲಾದೇಶಿ ಮಹಿಳೆಯರ ಬಂಧನ

ಥಾಣೆ : ಅಕ್ರಮವಾಗಿ ತಂಗಿದ್ದ ಐವರು ಬಾಂಗ್ಲಾದೇಶಿ ಮಹಿಳೆಯರ ಬಂಧನ

5 Bangladeshi women held for illegal stay in Thane

ಥಾಣೆ, ಡಿ.4- ಇಲ್ಲಿ ಅಕ್ರಮವಾಗಿ ತಂಗಿದ್ದ ಐವರು ಬಾಂಗ್ಲಾದೇಶಿ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ . ಖಚಿತ ಸುಳಿವಿನ ಮೇರೆಗೆ ಅಪರಾಧ ವಿಭಾಗದ ಮಾನವ ಕಳ್ಳಸಾಗಣೆ ನಿಗ್ರಹ ದಳದ ಸಿಬ್ಬಂದಿ ಮೀರಾ ರಸ್ತೆ ಮತ್ತು ನಯಾನಗರ ಪ್ರದೇಶದ ಎರಡು ವಸತಿ ಆವರಣಗಳ ಮೇಲೆ ದಾಳಿ ನಡೆಸಿರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲಿ ಒಂದೆರಡು ಕೊಠಡಿಗಳಲ್ಲಿ ವಾಸಿಸುತ್ತಿರುವ ಮಹಿಳೆಯರೊಂದಿಗೆ ಸಂವಹನ ನಡೆಸಲು ಹಿಂದೇಟು ಹಾಕಿದರು ಎಂದು ಪೊಲೀಸ್‌‍ ಇನ್‌್ಸಪೆಕ್ಟರ್‌ ಸಮೀರ್‌ ಅಹಿರಾರಾವ್‌ ಹೇಳಿದ್ದಾರೆ.
ಇಬ್ಬರು ಬಾಂಗ್ಲಾದೇಶಿ ಮಹಿಳೆಯರನ್ನು ಮೀರಾ ರೋಡ್‌ನಿಂದ ಮತ್ತು ಇತರ ಮೂವರನ್ನು ನಯಾನಗರದಿಂದ ಪೊಲೀಸರು ಬಂಧಿಸಿದ್ದಾರೆ ಎಂದು ಅವರು ಹೇಳಿದರು.

ಮಹಿಳೆಯರು ಅಕ್ರಮವಾಗಿ ಭಾರತ ಪ್ರವೇಶಿಸಿ ಇಲ್ಲಿ ಉಳಿಯಲು ಯಾವುದೇ ದಾಖಲೆಗಳನ್ನು ಹೊಂದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ವಿದೇಶಿ ಪ್ರಜೆಗಳ ಕಾಯಿದೆ ಮತ್ತು ಭಾರತೀಯ ಪಾಸ್‌‍ಪೋರ್ಟ್‌ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಮೀರಾ ರೋಡ್‌ ಮತ್ತು ನಯಾ ನಗರ ಪೊಲೀಸ್‌‍ ಠಾಣೆಗಳಲ್ಲಿ ಅವರ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದರು

RELATED ARTICLES

Latest News