ಕೋಲ್ಕತ್ತಾ,ಸೆ.23- ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಮತ್ತು ಅದರ ಸುತ್ತಮತ್ತಲಿನ ಉಪನಗರಗಳಲ್ಲಿ ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಐದು ಜನರು ಸಾವನ್ನಪ್ಪಿ, ಹಲವಾರು ಮಂದಿ ಸಂಕಷ್ಟಕ್ಕೆ ಸಿಲಿಕಿದ್ದಾರೆ.ಕೋಲ್ಕತ್ತಾದ ಬೆನಿಯಾಪುಕುರ್, ಕಾಳಿಕಾಪುರ್, ನೇತಾಜಿನಗರ ಗರಿಯಾಹತ್ ಮತ್ತು ಎಕ್ಸಾಲ್ಟುರದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಸಾವುಗಳು ಸಂಭವಿಸಿವೆ.
ನೀರಿನ ಹರಿವು ತೊಂದರೆ ಉಂಟು ಮಾಡಿದೆ. ಜೊತೆಗೆ ಉಪನಗರ ರೈಲು ಮತ್ತು ಮೆಟ್ರೋ ಸೇವೆಗಳಿಗೂ ಅಡ್ಡಿಯಾಗಿದೆ. ನಗರದ ಹಲವಾರು ತಗ್ಗುಪ್ರದೇಶಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಹಲವಾರು ಶಾಲೆಗಳು ಮಕ್ಕಲಿಗೆ ರಜೆ ಘೋಷಿಸಿವೆ.
ನಗರದ ದಕ್ಷಿಣ ಮತ್ತು ಪೂರ್ವ ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದೆ. ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ಮಾಹಿತಿಯ ಪ್ರಕಾರ, ಗರಿಯಾ ಕಾಮದಹರಿಯಲ್ಲಿ ಕೆಲವೇ ಗಂಟೆಗಳಲ್ಲಿ 332 ಮಿ.ಮೀ ಮಳೆಯಾಗಿದ್ದು, ಜೋಧಪುರ ಪಾರ್ಕ್ನಲ್ಲಿ 285 ಮಿಮೀ, ಕಾಳಿಘಾಟ್ನಲ್ಲಿ 280 ಮಿಮೀ, ಟಾಪ್ತಿಯಾದಲ್ಲಿ 275 ಮಿಮೀ ಮತ್ತು ಬ್ಯಾಲಿಗಂಗೆಯಲ್ಲಿ 264 ಮಿಮೀ ಮಳೆಯಾಗಿದೆ.
ನಿರಂತರ ಮತ್ತು ಭಾರೀ ಮಳೆಯಿಂದಾಗಿ ಕೋಲ್ಕತ್ತಾಗೆ ಹೋಗುವ ಮತ್ತು ಹೊರಡುವ ವಿಮಾನಗಳ ಮೇಲೆ ಪರಿಣಾಮ ಬೀರಬಹುದು. ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ಪರಿಸ್ಥಿತಿಯನ್ನು ಪರಿಶೀಲಿಸಿ ಎಂದು ಏರ್ ಇಂಡಿಯಾ ತಿಳಿಸಿದೆ.
ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿರುವುದರಿಂದ, ವಿಮಾನ ನಿಲ್ದಾಣಕ್ಕೆ ಮತ್ತು ಅಲ್ಲಿಂದ ವಿಮಾನ ಸಂಚಾರ ವಿಳಂಬವಾಗುವ ಮತ್ತು ನಿಧಾನವಾಗುವ ಸಾಧ್ಯತೆಯಿದ್ದು, ಜನರ ಪ್ರಯಾಣವನ್ನು ಸ್ಥಿರವಾಗಿಡಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇವೆ ಎಂದು ಇಂಡಿಗೋ ತಿಳಿಸಿದೆ.
ಸೇವೆಗಳಲ್ಲಿ ವ್ಯತ್ಯಯ
ರೈಲು ಹಳಿಗಳು ನೀರಿನಿಂದ ತುಂಬಿರುವುದರಿಂದ ನಗರ ಮತ್ತು ಉಪನಗರಗಳಲ್ಲಿ ರೈಲು ಮತ್ತು ಮೆಟ್ರೋ ಸೇವೆಗಳು ವ್ಯತ್ಯಯಗೊಂಡಿವೆ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಶಾಹಿದ್ ಖುದಿರಾಮ್ ಮತ್ತು ಮೈದಾನ್ ನಿಲ್ದಾಣಗಳ ನಡುವೆ ಬೆಳಿಗ್ಗೆಯಿಂದ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೋಲ್ಕತ್ತಾ ಮೆಟ್ರೋ ರೈಲ್ವೆ ವಕ್ತಾರರು ತಿಳಿಸಿದ್ದಾರೆ.
ದಕ್ಷಿಣೇಶ್ವರ ಮತ್ತು ಮೈದಾನ ನಿಲ್ದಾಣಗಳ ನಡುವೆ ಮೊಟಕುಗೊಳಿಸಿದ ಸೇವೆಗಳನ್ನು ನಡೆಸಲಾಗುತ್ತಿದೆ. ಹಳಿಗಳಲ್ಲಿ ನೀರು ನಿಂತ ಕಾರಣ, ಸೀಲ್ದಾ ದಕ್ಷಿಣ ವಿಭಾಗದಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ, ಆದರೆ ಸೀಲ್ವಾ ಉತ್ತರ ಮತ್ತು ಮುಖ್ಯ ವಿಭಾಗಗಳಲ್ಲಿ ಸೇವೆಗಳನ್ನು ನಡೆಸಲಾಗುತ್ತಿದೆ ಎಂದು ಪೂರ್ವ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೂರ್ವ ರೈಲ್ವೆಯ ಹೌರಾ ಮತ್ತು ಕೋಲ್ಕತ್ತಾ ಟರ್ಮಿನಲ್ ನಿಲ್ದಾಣಗಳಿಗೆ ರೈಲು ಸೇವೆಗಳು ಭಾಗಶಃ ವ್ಯತ್ಯಯಗೊಂಡಿವೆ. ಚಿತ್ಪುರ ಯಾರ್ಡ್ಲ್ಲಿ ನೀರು ನಿಂತ ಕಾರಣ ವೃತ್ತಾಕಾರದ ರೈಲ್ವೆ ಮಾರ್ಗದಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಲಾಕಾಲೇಜುಗಳಿಗೆ ರಜೆ ಘೋಷಣೆ:
ಭಾರೀ ಮಳೆ ಮತ್ತು ರಸ್ತೆಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ಅನೇಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದು ಮತ್ತು ಸಂಚಾರ ದಟ್ಟಣೆಯಿಂದಾಗಿ ಕಚೇರಿಗೆ ಹೋಗುವವರು ತಮ್ಮ ಸ್ಥಳಗಳನ್ನು ತಲುಪಲು ಕಷ್ಟಪಡುತ್ತಿದ್ದಾರೆ. ನಗರದ ದಕ್ಷಿಣ ಮತ್ತು ಪೂರ್ವ ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದ್ದು, ಗರಿಯಾ ಕಾಮದಹರಿಯಲ್ಲಿ ಕೆಲವೇ ಗಂಟೆಗಳಲ್ಲಿ 332 ಮಿಮೀ ಮಳೆಯಾಗಿದ್ದು, ಜೋಧಪುರ ಪಾರ್ಕ್ಲ್ಲಿ 285 ಮಿ.ಮೀ ಮಳೆಯಾಗಿದೆ ಎಂದು ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ತಿಳಿಸಿದೆ.
ಕಾಲಿಘಾಟ್ನಲ್ಲಿ 280 ಮಿ.ಮೀ.. ಟಾಪ್ತಿಯಾ 275 ಮಿ.ಮೀ., ಬ್ಯಾಲಿಗಂಜ್ 264 ಮಿ.ಮೀ., ಉತ್ತರ ಕೋಲ್ಕತ್ತಾದ ಥಂಟಾನಿಯಾದಲ್ಲಿ 195 ಮಿ.ಮೀ. ಮಳೆಯಾಗಿದೆ ಎಂದು ಅವರು ಹೇಳಿದರು.
ಬಂಗಾಳಕೊಲ್ಲಿಯ ಈಶಾನ್ಯ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶವು ದಕ್ಷಿಣ ಬಂಗಾಳದ ಹಲವಾರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಹೇಳಿರುವುದರಿಂದ ನಗರವು ಹೆಚ್ಚಿನ ಮಳೆಗೆ ಸಿದ್ಧವಾಗಿದೆ. ದಕ್ಷಿಣ ಬಂಗಾಳದ ಪುರ್ಬಾ ಮತ್ತು ಪಶ್ಚಿಮ ಮೇದಿನಿಪುರ, ದಕ್ಷಿಣ 24 ಪರಗಣಗಳು, ಜಾಗ್ರಾಮ್ ಮತ್ತು ಬಂಕುರಾ ಜಿಲ್ಲೆಗಳಲ್ಲಿ ಬುಧವಾರದವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.