ಬುಲ್ಲಾನ, ಏ.2 ಪೂರ್ವ ಮಹಾರಾಷ್ಟ್ರದ ಬುಲ್ಲಾನ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ.
ಖಮ್ಯಾಂವ್-ಶೆಗಾಂವ್ ಹೆದ್ದಾರಿಯಲ್ಲಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (ಎಂಎಸ್‌ಆರ್‌ಟಿಸಿ) ಬಸ್ ಬೊಲೆರೊಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದಾದ ಸ್ವಲ್ಪ ಸಮಯದಲ್ಲಿ ಇದೇ ಸ್ಥಳದಲ್ಲಿ ಖಾಸಗಿ ಬಸ್‌ವೊಂದು ಎರಡು ವಾಹನಗಳಿಗೆ ಡಿಕ್ಕಿ ಹೊಡೆದಿದೆ ಭೀಕರ ದುರಂತದಲ್ಲಿ ಕಾರಿಲ್ಲಿದ್ದವರು ಹಾಗು ಒಬ್ಬ ಬಸ್ ಚಾಲಕ ಮೃತಪ್ಪಿದ್ದಾನೆ.
ಅಪಘಾತದ ರಭಸಕ್ಕೆ ವಾಹನಗಳು ಜಖಂಗೊಂಡಿದೆ.ಪೊಲೀಸರು ಹಾಗು ಸ್ಥಳೀಯರು ವಾಹನದಿಂದ ಶವಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆಗೆ ಅತಿ ವೇಗ ಕಾರಣ ಎನ್ನಲಾಗುತ್ತಿದ್ದು ತನಿಖೆ ಮುಂದುವರೆದಿದೆ ಎಂದು ಅಧಿಕಾರಿ ಹೇಳಿದರು.