Thursday, September 11, 2025
Homeರಾಷ್ಟ್ರೀಯ | Nationalದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ 5 ಐಸಿಸ್‌ ಉಗ್ರರ ಸೆರೆ

ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ 5 ಐಸಿಸ್‌ ಉಗ್ರರ ಸೆರೆ

5 ISIS terrorists arrested for plotting attack in different parts of the country

ನವದೆಹಲಿ,ಸೆ.11– ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಆರೋಪದ ಹಿನ್ನೆಲೆಯಲ್ಲಿ ದೆಹಲಿ ವಿಶೇಷ ಪೊಲೀಸ್‌‍ ದಳ ಹಾಗೂ ಕೇಂದ್ರ ಸಂಸ್ಥೆಗಳು ಜಂಟಿ ಕಾರ್ಯಾಚರಣೆ ನಡೆಸಿ ಶಂಕಿತ 5 ಮಂದಿ ಐಸಿಸ್‌‍ ಭಯೋತ್ಪಾದಕರನ್ನು ಬಂಧಿಸಿವೆ.

ಮುಂಬೈ ನಿವಾಸಿಗಳಾದ ಅಫ್ತಾಬ್‌ ಮತ್ತು ಅಬು ಸುಫಿಯಾನ್‌ ಅವರನ್ನು ದೆಹಲಿಯ ನಿಜಾಮುದ್ದೀನ್‌ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆಶರ್‌ ದಾನಿಶ್‌ ಅವರನ್ನು ರಾಂಚಿಯಿಂದ ಬಂಧಿಸಲಾಗಿದೆ. ಕಮ್ರಾನ್‌ ಖುರೇಷಿ ಅವರನ್ನು ಮಧ್ಯಪ್ರದೇಶದ ರಾಜ್‌ಗಢದಿಂದ ಮತ್ತು ಹುಜೈಫ್‌ ಯೆಮೆನ್‌ ಅವರನ್ನು ತೆಲಂಗಾಣದಿಂದ ಬಂಧಿಸಲಾಗಿದೆ.

ಬಂಧಿತರಿಂದ ಅಪಾರ ಪ್ರಮಾಣದ ರಾಸಾ ಯನಿಕಗಳು ಮತ್ತು ಶಸಾ್ತ್ರಸ್ತ್ರಗಳ
ಕಾರ್ಟ್ರಿಡ್‌್ಜಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ರಾಸಾಯನಿಕಗಳಲ್ಲಿ ಹೈಡ್ರೋಕ್ಲೋರಿಕ್‌ ಆಮ್ಲ, ನೈಟ್ರಿಕ್‌ ಆಮ್ಲ, ಸೋಡಿಯಂ ಬೈಕಾರ್ಬನೇಟ್‌‍, ಸಲ್ಫರ್‌ ಪುಡಿ, ಪಿಹೆಚ್‌ ಮೌಲ್ಯ ಪರೀಕ್ಷಕ ಮತ್ತು ಬಾಲ್‌ ಬೇರಿಂಗ್‌ಗಳು ಸೇರಿವೆ.

ಇದಲ್ಲದೆ, ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌, ತೂಕದ ಯಂತ್ರ, ಬೀಕರ್‌ ಸೆಟ್‌‍, ಸುರಕ್ಷತಾ ಕೈಗವಸುಗಳು, ಉಸಿರಾಟದ ಮುಖವಾಡಗಳು, ಮದರ್ಬೋರ್ಡ್‌ ಹೊಂದಿರುವ ಪ್ಲಾಸ್ಟಿಕ್‌ ಕಂಟೇನರ್‌, ವೈರ್‌ಗಳು ಇತ್ಯಾದಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ವಿವಿಧ ರಾಜ್ಯಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಲಾದ ಐವರು ಶಂಕಿತ ಐಸಿಸ್‌‍ ಕಾರ್ಯಕರ್ತರು, ರಾಸಾಯನಿಕ ಶಸಾ್ತ್ರಸ್ತ್ರಗಳನ್ನು ತಯಾರಿಸುವಲ್ಲಿ ಪರಿಣತಿ ಹೊಂದಿದ್ದರು. ಸಂಘಟನೆಗೆ ಯುವಕರನ್ನು ನೇಮಿಸಿಕೊಳ್ಳಲು ಖಿಲಾಫತ್‌ ಮಾದರಿಯನ್ನು ಅನುಸರಿಸುತ್ತಿದ್ದರು. ಆರೋಪಿಗಳು ಭಯೋತ್ಪಾದಕ ಸಂಘಟನೆಯ ಸ್ಲೀಪರ್‌ ಮಾಡ್ಯೂಲ್‌‍ನ ಭಾಗವಾಗಿದ್ದರು ಮತ್ತು ಬಾಂಬ್‌‍ಗಳನ್ನು ತಯಾರಿಸುವುದು, ಶಸಾ್ತ್ರಸ್ತ್ರಗಳನ್ನು ಸಂಗ್ರಹಿಸುವುದು ಹಾಗೂ ಸಂಘಟನೆಯ ಬಲವನ್ನು ಹೆಚ್ಚಿಸುವ ಕೆಲಸವನ್ನು ಅವರು ನಿರ್ವಹಿಸುತ್ತಿದ್ದರು.

ಶಂಕಿತ ಭಯೋತ್ಪಾದಕರ ಚಲನವಲನಗಳ ಬಗ್ಗೆ ಅಧಿಕಾರಿಗಳಿಗೆ ನಿರ್ದಿಷ್ಟ ಗುಪ್ತಚರ ಮಾಹಿತಿ ದೊರೆತ ನಂತರ ಆರು ತಿಂಗಳಿಗೂ ಹೆಚ್ಚು ಕಾಲ ನಿಗಾ ವಹಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ. ಈ ಸುಳಿವಿನ ಮೇರೆಗೆ ವಿಶೇಷ ದಳವು ಯಾವುದೇ ಶಂಕಿತರು ತಪ್ಪಿಸಿಕೊಳ್ಳದಂತೆ ತಡೆಯಲು ಹಲವಾರು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿತು.

ದೆಹಲಿಯಲ್ಲಿ, ಪೊಲೀಸರು ಮುಂಬೈ ನಿವಾಸಿಗಳಾದ ಅಫ್ತಾಬ್‌ ಮತ್ತು ಸುಫಿಯಾನ್‌ ಎಂಬ ಇಬ್ಬರು ಶಂಕಿತರನ್ನು ಬಂಧಿಸಿ ಮುಂಬೈನಲ್ಲಿರುವ ಅವರ ಅಡಗುತಾಣಗಳಿಂದ ಶಸಾ್ತ್ರಸ್ತ್ರಗಳು ಮತ್ತು ಐಇಡಿ ತಯಾರಿಸುವ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ಪ್ರತ್ಯೇಕ ದಾಳಿಯಲ್ಲಿ ಮತ್ತೊಬ್ಬ ಶಂಕಿತ ಅಶ್ರಫ್‌ ಡ್ಯಾನಿಶ್‌ ಬಂಧಿತನಾಗಿದ್ದಾನೆ. ಮೂಲಗಳ ಪ್ರಕಾರ, ಗುಂಪಿನ ಪ್ರಮುಖ ಸದಸ್ಯ ಡ್ಯಾನಿಶ್‌ ಭಾರತದಲ್ಲಿ ಸಂಪೂರ್ಣ ಜಾಲವನ್ನು ನಿರ್ವಹಿಸುತ್ತಿದ್ದ ಮತ್ತು ಬಹು ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ವಿದೇಶಿ ನಿರ್ವಾಹಕರೊಂದಿಗೆ ಸಂಪರ್ಕದಲ್ಲಿರುವುದು ಕಂಡುಬಂದಿದೆ. ಬಾಂಬ್‌ ತಯಾರಿಕೆಯಲ್ಲಿ ಬಳಸುವ ರಾಸಾಯನಿಕಗಳನ್ನು ಆತ ಹೊಂದಿದ್ದ ಎನ್ನಲಾಗಿದೆ.

ಶಂಕಿತರು ವಿವಿಧ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಳಸಿಕೊಂಡು ಭಾರತದಲ್ಲಿ ಜನರನ್ನು ತೀವ್ರಗಾಮಿಗಳಾಗಿ ಪರಿವರ್ತನೆ ಮಾಡಿ, ಭಯೋತ್ಪಾದನಾ ಚಟುವಟಿಕೆ ನಡೆಸಲು ನೇಮಕ ಮಾಡಿಕೊಳ್ಳುತ್ತಿದ್ದರು ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

ಕೋಮು ಉದ್ವಿಗ್ನತೆಯನ್ನು ಸೃಷ್ಟಿಸುವ ಮತ್ತು ಧಾರ್ಮಿಕ ಸಾಮರಸ್ಯವನ್ನು ಕದಡಲು ಜನರನ್ನು ಪ್ರಚೋದಿಸುವ ಉದ್ದೇಶದಿಂದ ಅವರು ಬಹು ಸಾಮಾಜಿಕ ಮಾಧ್ಯಮ ಗುಂಪುಗಳನ್ನು ಸಹ ನಿರ್ವಹಿಸುತ್ತಿದ್ದರು.

ಭಾರತವನ್ನು ಖಿಲಾಫತ್‌ನ ಭಾಗವೆಂದು ಘೋಷಿಸುವ ಮತ್ತು ಉದ್ದೇಶಿತ ಹತ್ಯೆಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಈ ಮಾಡ್ಯೂಲ್‌ ಸಕಿಬ್‌ ನಾಚನ್‌ ಅವರಂತೆಯೇ ಕಾರ್ಯನಿರ್ವಹಿಸುತ್ತಿತ್ತು ಎಂದು ಆರೋಪಿಸಲಾಗಿದೆ. ಶಂಕಿತರ ಕಾರ್ಯಾಚರಣೆಯ ವಿಧಾನವನ್ನು ಸಂಪೂರ್ಣವಾಗಿ ಬಹಿರಂಗಪಡಿಸಲು ಮೂಲಭೂತವಾದಿಗಳನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ವಿಶೇಷ ಘಟಕದ ಮೂಲಗಳು ತಿಳಿಸಿವೆ.

ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರನಾಗಿರುವ ಡ್ಯಾನಿಶ್‌, ಗುಂಪಿನ ನಾಯಕನಾಗಿದ್ದು, ಗಜ್ವಾ ಎಂಬ ಕೋಡ್‌ ಹೆಸರಿನೊಂದಿಗೆ ಗುರುತಿಸಿಕೊಂಡಿದ್ದ. ವಿದ್ಯಾರ್ಥಿಯಂತೆ ವೇಷ ಧರಿಸಿ ರಾಂಚಿಯ ತಬಾರಕ್‌ ಲಾಡ್‌್ಜನಲ್ಲಿ ನಡೆದ ದಾಳಿಯ ಸಮಯದಲ್ಲಿ ಸಿಕ್ಕಿಬಿದ್ದ. ಈ ವರ್ಷದ ಜನವರಿಯಲ್ಲಿ ಅವನು ನಗರಕ್ಕೆ ಬಂದಿದ್ದು, ಬಾಂಬ್‌ಗಳನ್ನು ತಯಾರಿಸುವಲ್ಲಿ ಪರಿಣತನಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಕಾರ್ಯಾಚರಣೆಯ ಪೂರ್ಣ ವ್ಯಾಪ್ತಿಯ ಬಗ್ಗೆ ಮತ್ತು ಪಾಕಿಸ್ತಾನ ಮೂಲದ ನಿರ್ವಾಹಕರು ಸೇರಿದಂತೆ ಅವರ ಸಂಪರ್ಕಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಶಂಕಿತರನ್ನು ಪ್ರಸ್ತುತ ವಿಚಾರಣೆ ನಡೆಸಲಾಗುತ್ತಿದೆ.

RELATED ARTICLES

Latest News