Friday, September 20, 2024
Homeಇದೀಗ ಬಂದ ಸುದ್ದಿಯೂಟ್ಯೂಬ್‌ ನೋಡಿ ತಯಾರಿಸಿದ್ದ ಬಾಂಬ್‌ ಸ್ಫೋಟ, ಬಾಲಕರಿಗೆ ಗಾಯ

ಯೂಟ್ಯೂಬ್‌ ನೋಡಿ ತಯಾರಿಸಿದ್ದ ಬಾಂಬ್‌ ಸ್ಫೋಟ, ಬಾಲಕರಿಗೆ ಗಾಯ

ಪಾಟ್ನಾ,ಆ.9- ಯೂಟ್ಯೂಬ್‌ ನೋಡಿ ಮಕ್ಕಳು ತಯಾರಿಸಿದ್ದ ಬಾಂಬ್‌ ಸ್ಫೋಟಿಸಿ ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಿಹಾರದ ಮುಜಾಫರ್‌ ಜಿಲ್ಲೆಯಲ್ಲಿ ನಡೆದಿದೆ.

ಮುಜಾಫರ್‌ಪುರ ಜಿಲ್ಲೆಯಲ್ಲಿ ಐವರು ಮಕ್ಕಳು ಯೂಟ್ಯೂಬ್‌ ನೋಡಿ ಬಾಂಬ್‌ ತಯಾರಿಸಲು ಮುಂದಾಗಿದ್ದರು. ಬೆಂಕಿಕಡ್ಡಿಗಳಿಂದ ಹಿಡಿದು ಗನ್‌ಪೌಡರ್‌ನವರೆಗೆ ಎಲ್ಲವನ್ನೂ ಸಂಗ್ರಹಿಸಿ ಟಾರ್ಚ್‌ಲೈಟ್‌ಗೆ ಸುರಿದು ಬಾಂಬ್‌ ಒಂದನ್ನು ತಯಾರಿಸಿದ್ದರು ಅದು ಏಕಾಏಕಿ ಸ್ಫೋಟಗೊಂಡ ಪರಿಣಾಮ ಒಂದು ಮಗು ಗಂಭೀರವಾಗಿ ಗಾಯಗೊಂಡಿದ್ದು,ಉಳಿದ ನಾಲ್ಕು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಗೈಘಾಟ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯ ಮುನ್ನಿ ಬಂಗ್ರಾ ಕಲ್ಯಾಣ್‌ ಗ್ರಾಮದಲ್ಲಿ ಐವರು ಮಕ್ಕಳು ಯೂಟ್ಯೂಬ್‌ ವಿಡಿಯೋ ನೋಡಿ ಬಾಂಬ್‌ ತಯಾರಿಸಲು ಬಯಸಿದ್ದರು. ಮಕ್ಕಳು ಬೆಂಕಿಕಡ್ಡಿಗಳು ಮತ್ತು ಗನ್‌ಪೌಡರ್‌ಗಳನ್ನು ಸಂಗ್ರಹಿಸಿ ಟಾರ್ಚ್‌ಲೈಟ್‌ಗೆ ಸುರಿದಿದ್ದರು.

ನಂತರ, ಅವರು ಅದರಲ್ಲಿ ಬ್ಯಾಟರಿಯನ್ನು ಹಾಕಿದ್ದಾರೆ. ಏಕಾಏಕಿ ಅದು ಸ್ಫೋಟಗೊಂಡಿದೆ. ಈ ಅವಘಡದಲ್ಲಿ ಒಂದು ಮಗು ಗಂಭೀರವಾಗಿ ಗಾಯಗೊಂಡಿದ್ದು, ಉಳಿದ ನಾಲ್ಕು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಯೂಟ್ಯೂಬ್‌ ವಿಡಿಯೋ ನೋಡಿ ಮಕ್ಕಳು ತಯಾರಿಸಲು ಪ್ರಯತ್ನಿಸಿದ್ದು ಈ ವೇಳೆ ದೊಡ್ಡ ಸ್ಫೋಟ ಸಂಭವಿಸಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್‌‍ ವರಿಷ್ಠಾಧಿಕಾರಿ ರಾಕೇಶ್‌ ಕುಮಾರ್‌ ತಿಳಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಪೋಷಕರು ತಮ ಮಕ್ಕಳ ಆನ್‌ಲೈನ್‌ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

RELATED ARTICLES

Latest News