ಬೆಂಗಳೂರು,ಏ.9- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಪ್ರತಿಪಾದಿಸಿ ವಿಧಾನಸಭೆಯಲ್ಲಿ ಸಿಂಹ ಗರ್ಜನೆ ಮಾಡಿದ್ದಕ್ಕೆ ಈಗ 50 ವರ್ಷ ತುಂಬಿದೆ.
1975ರ ಏ.7ರಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಎಚ್.ಡಿ.ದೇವೇಗೌಡರು, ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ ಎಂದು ಪ್ರತಿಪಾದಿಸಿದ್ದರು. ಬೆಳಗಾವಿ ವಿಚಾರದಲ್ಲಿ ಕೇಂದ್ರದ ನಾಯಕರು ಮಧ್ಯಪ್ರವೇಶ ಮಾಡಿದರೆ ಕರ್ನಾಟಕದಲ್ಲಿ ರಕ್ತಪಾತ ನಡೆಯಲಿದೆ ಎಂದು ಅವರು ವಿಧಾನಸಭೆಯಲ್ಲಿ ಸಿಂಹ ಘರ್ಜನೆ ಮಾಡಿದ್ದರು.
50 ವರ್ಷಗಳ ಹಿಂದೆ ದೇವೇಗೌಡರು ಬೆಳಗಾವಿಯ ಬಗ್ಗೆ ಸದನದಲ್ಲಿ ಪ್ರತಿಪಾದಿಸಿದ ವಿಚಾರವನ್ನು ಜೆಡಿಎಸ್ ತನ್ನ ಎಕ್‌್ಸ ಖಾತೆಯಲ್ಲಿ ಹಂಚಿಕೊಂಡಿದೆ.