ಬೆಂಗಳೂರು, ಡಿ.2– ಟೀಮ್ ಇಂಡಿಯಾದ ಯುವ ವೇಗಿ ಜಸ್ ಪ್ರೀತ್ ಬೂಮ್ರಾ ಒಂದು ವೇಳೆ ಇಂಡಿಯನ್ ಪ್ರೀಮಿಯರ್ ಲೀಗ್ ನ ಹರಾಜಿಗೆ ಬಂದರೆ ಅವರನ್ನು ಖರೀದಿಸಲು 520 ಕೋಟಿ ರೂ.ಗಳು ಬೇಕಾಗುತ್ತದೆ ಎಂದು ಗುಜರಾತ್ ಟೈಟಾಟ್ಸ್ ನ ಹೆಡ್ ಕೋಚ್ ಆಶೀಶ್ ನೆಹ್ರಾ ಹೇಳಿದ್ದಾರೆ.
2025ರ ಐಪಿಎಲ್ ಟೂರ್ನಿ ನಿಮಿತ್ತ ಮುಂಬೈ ಇಂಡಿಯನ್ ಫ್ರಾಂಚೈಸಿ ಜಸ್ ಪ್ರೀತ್ ಬೂಮ್ರಾ ಅವರನ್ನು ಮೆಗಾ ಹರಾಜಿಗೂ ಮುನ್ನವೇ 18 ಕೋಟಿ ರೂ. ನೀಡಿ ರಿಟೇನ್ ಮಾಡಿಕೊಂಡಿದೆ.
ಪರ್ತ್ ಟೆಸ್ಟ್ ನಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಬೂಮ್ರಾ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ತಂಡಕ್ಕೆ 295 ರನ್ ಗಳ ಗೆಲುವಿನ ಕಾಣಿಕೆ ನೀಡಿದ್ದರು.
`ರೋಹಿತ್ ಅನುಪಸ್ಥಿತಿಯಲ್ಲಿ ಬೂಮ್ರಾ ತಂಡವನ್ನು ಹಲವು ಬಾರಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರೆ, ಆದರೆ ಹಿಂದಿನ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 0-3 ಅಂತರದ ಸೋಲು ಕಂಡಿದ್ದರೂ ಕೂಡ ಆಟಗಾರರಲ್ಲಿ ಸ್ಥೈರ್ಯ ತುಂಬಿದ ಬೂಮ್ರಾ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಒಂದು ವೇಳೆ ಬೂಮ್ರಾ ಐಪಿಎಲ್ ಹರಾಜಿಗೆ ಬಂದರೆ ಆತನ ಖರೀದಿಗೆ 520 ಕೋಟಿ ಸಾಲದು’ ಎಂದು ಭಾರತ ತಂಡದ ಮಾಜಿ ವೇಗಿ ಆಶೀಶ್ ನೆಹ್ರಾ ಹೇಳಿದ್ದಾರೆ.