Wednesday, April 30, 2025
Homeಅಂತಾರಾಷ್ಟ್ರೀಯ | Internationalನ್ಯೂಜಿಲೆಂಡ್‌ನಲ್ಲಿ 6.2 ತೀವ್ರತೆಯ ಭೂಕಂಪ

ನ್ಯೂಜಿಲೆಂಡ್‌ನಲ್ಲಿ 6.2 ತೀವ್ರತೆಯ ಭೂಕಂಪ

6.2-magnitude earthquake hits off New Zealand

ವೆಲ್ಲಿಂಗ್ಟನ್, ಏ.30-ನ್ಯೂಜಿಲೆಂಡ್‌ನ ಪಶ್ಚಿಮ ಕರಾವಳಿಯಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ. ಸ್ಥಳೀಯ ಸಮಯ ಬೆಳಗಿನ ಜಾವ 1 ಗಂಟೆ ಸಮಯದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ನ್ಯೂಜಿಲೆಂಡ್‌ನ ನೈಋತ್ಯಕ್ಕೆ 187 ಮೈಲುಗಳು ದೂರದ ಕರಾವಳಿಯ ಸಮುದ್ರದ 10 ಕಿ.ಮೀ ಆಳದಲ್ಲಿ ಕೇಂದ್ರ ಬಿಂದು ದಾಖಲಾಗಿದೆ. ಆದರೆ ನ್ಯೂಜಿಲೆಂಡ್‌ನಲ್ಲಿ ಭೂಕಂಪದ ಅನುಭವವಾಗಲಿಲ್ಲ ಎಂದು ದೇಶದ ಭೂವೈಜ್ಞಾನಿಕ ವಿಜ್ಞಾನ ಸಂಸ್ಥೆ ತಿಳಿಸಿದೆ.

ಸುಮಾರು 50 ಲಕ್ಷ ಜನರಿಗೆ ನೆಲೆಯಾಗಿರುವ ನ್ಯೂಜಿಲೆಂಡ್ ಭೂಕಂಪಗಳು ಮತ್ತು ಜ್ವಾಲಾಮುಖಿಗಳು ಸಾಮಾನ್ಯವಾಗಿ ಕಂಡುಬರುವ ಪೆಸಿಫಿಕ್ ಮಹಾಸಾಗರದ ಸುತ್ತಲಿನ ಭೂಕಂಪನ ದೋಷಗಳ ಕಮಾನಿನ ರಿಂಗ್ ಆಫ್ ಫೈರ್ ನಲ್ಲಿದೆ.

RELATED ARTICLES

Latest News