Saturday, April 27, 2024
Homeಬೆಂಗಳೂರುಬೆಂಗಳೂರಿನಲ್ಲಿ 6.22ಲಕ್ಷ ಹೊಸ ಮತದಾರರು

ಬೆಂಗಳೂರಿನಲ್ಲಿ 6.22ಲಕ್ಷ ಹೊಸ ಮತದಾರರು

ಬೆಂಗಳೂರು,ಮಾ.28- ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳಲ್ಲಿ 6.22 ಲಕ್ಷ ಹೊಸ ಮತದಾರರಿದ್ದಾರೆ.

ಬೆಂಗಳೂರು ದಕ್ಷಿಣ, ಕೇಂದ್ರ ಹಾಗೂ ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ 2019ರ ಲೋಕಸಭಾ ಚುನಾವಣೆಗೆ ಹೋಲಿಕೆ ಮಾಡಿದರೆ ಈ 5 ವರ್ಷದಲ್ಲಿ ಬರೋಬ್ಬರಿ 6,22,047 ಲಕ್ಷ ಮತದಾರರು ಏರಿಕೆಯಾಗಿರುವುದು ಕಂಡು ಬಂದಿದೆ.

ಈ ಪೈಕಿ 2,80,572 ಪುರುಷರು, 3,41,254 ಮಹಿಳೆಯರು ಹಾಗೂ 221 ಲೈಂಗಿಕ ಅಲ್ಪಸಂಖ್ಯಾತ ಮತದಾರರಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ 16,29,089 ಪುರುಷ, 15,44,415 ಮಹಿಳೆ, 594 ಇತರೆ ಮತದಾರರು ಸೇರಿದಂತೆ ಒಟ್ಟು 31,74,098 ಮತದಾರರಿದ್ದಾರೆ.

ಬೆಂಗಳೂರು ಕೇಂದ್ರದಲ್ಲಿ 12,36,897 ಪುರುಷ, 11,61,548 ಮಹಿಳೆ, 465 ಇತರೆ ಮತದಾರರು ಸೇರಿದಂತೆ 23,98,910 ಮತದಾರರಿದ್ದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 11,95,285 ಪುರುಷರು, 11,21,788 ಮಹಿಳಾ, 399 ಇತರರು ಸೇರಿದಂತೆ 23,17,472 ಮತದಾರರಿದ್ದು, ಒಟ್ಟಾರೆ ಮೂರು ಕ್ಷೇತ್ರಗಳಲ್ಲಿ 78,90,480 ಮತದಾರರಿದ್ದಾರೆ.

RELATED ARTICLES

Latest News