ಜೈಪುರ,ಮಾ.6- ರಾಜಸ್ಥಾನದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ವೇಗವಾಗಿ ಚಲಿಸುತ್ತಿದ್ದ ಕಾರು ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಬು ರಸ್ತೆಯ ಕಿಡ್ರಾಲಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ ಎಂದು ಮೌಂಟ್ ಅಬು ಸರ್ಕಲ್ ಆಫೀಸರ್ ಗೋಮಾರಾಮ್ ತಿಳಿಸಿದ್ದಾರೆ.
ಮೃತರನ್ನು ನಾರಾಯಣ್ ಪ್ರಜಾಪತ್, ಅವರ ಪತ್ನಿ ಪೋಶಿ ದೇವಿ, ಮಗ ದುಶ್ಯಂತ್, ಚಾಲಕ ಕಾಲೂರಾಮ್ ಮತ್ತು ಇತರ ಇಬ್ಬರು ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟವರೆಲ್ಲಾ ಅಹ್ಮದಾಬಾದ್ ನಿವಾಸಿಗಳಾಗಿದ್ದಾರೆ.