ಮುಂಬೈ.ಡಿ.10- ಇಲ್ಲಿನ ಕುರ್ಲಾ ಪ್ರದೇಶದಲ್ಲಿ ಪಾದಚಾರಿಗಳು ಮತ್ತು ವಾಹನಗಳಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದು, 49 ಮಂದಿ ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ 9:45 ರ ಸುಮಾರಿಗೆ ಘಟನೆ ಸಂಭವಿಸಿದ್ದು, ಬಹನುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ ಸಂಸ್ಥೆ (ಬೆಸ್ಟ್) ಬಸ್ (ಮಾರ್ಗ 332) ಚಾಲಕನ ನಿಯಂತ್ರಣ ತಪ್ಪಿ, ಹಲವಾರು ವಾಹನಗಳು ಮತ್ತು ಪಾದಚಾರಿಗಳ ಮೇಲೆ ಹರಿದು ಹೌಸಿಂಗ್ ಸೊಸೈಟಿಯ ಗೋಡೆಗೆ ಡಿಕ್ಕಿ ಹೊಡೆದಿದೆ.
ಘಟನೆ ನಡೆದಾಗ ಬಸ್ ಕುರ್ಲಾ ನಿಲ್ದಾಣದಿಂದ ಅಂಧೇರಿಗೆ ತೆರಳುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ದಾರಿಯಲ್ಲಿ ಬಸ ಜನರಿಕೆ ಡಿಕ್ಕಿ ಹೊಡೆಯಿತು ನಂತರ ಗೋಡೆಗೆ ಡಿಕ್ಕಿ ಹೊಡೆದು ನಿಂತಿತು.ಮತರನ್ನು ಕನ್ನಿಸ್ ಫಾತಿಮಾ ಅನ್ಸಾರಿ, ಶಿವಂ ಕಶ್ಯಪ್, ಅಫ್ರೀನ್ ಅಬ್ದುಲ್ ಸಲೀಂ ಶಾ ಮತ್ತು ಅನಮ್ ಶೇಖ್ ಎಂದು ಗುರುತಿಸಲಾಗಿದೆ.
ಕುರ್ಲಾದಲ್ಲಿ, ಬೆಸ್ಟ್ ಬಸ್ ನಿಯಂತ್ರಣ ತಪ್ಪಿ ಕೆಲವು ವಾಹನಗಳನ್ನು ನುಜ್ಜುಗುಜ್ಜುಗೊಳಿಸಿದೆ. ಗಾಯಗೊಂಡವರನ್ನು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ಚಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ವಿಚಾರಣೆ ನಡೆಯುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ (ವಲಯ 5) ಗಣೇಶ್ ಗಾವ್ಡೆ ಅವರು ಸುದ್ದಿಗಾರರಿಗೆ ತಿಳಿಸಿದರು.