ಬೆಂಗಳೂರು,ಜು.24-ನಗರದ ಬಸ್ ನಿಲ್ದಾಣದಲ್ಲಿ ಜಿಲೆಟಿನ್ ಕಡ್ಡಿ ಹಾಗೂ ಡಿಟೋನೇಟರ್ ಪತ್ತೆಯಾಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತರು, ಅವುಗಳ ಮೂಲ ಪತ್ತೆಯ ತನಿಖೆಗಾಗಿ 6 ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಜಿಲೆಟಿನ್ ಮತ್ತು ಡಿಟೋನೇಟರ್‌ಗಳನ್ನು ಯಾವ ಸ್ಥಳಗಳಿಂದ ತಂದು ನಗರದ ಕಲಾಸಿಪಾಳ್ಯ ಬಸ್ ನಿಲ್ದಾಣದ ಬಳಿ ಇಡಲಾಗಿದೆ ಎಂಬ ಬಗ್ಗೆ ಸಿಸಿಬಿ, ಇಂಟೆಲಿಜೆನ್ಸ್ , ಎಟಿಸಿ ತಂಡಗಳು ಮಾಹಿತಿಗಳನ್ನು ಕಲೆ ಹಾಕುತ್ತಿದ್ದು, ಮೇಲ್ನೋಟಕ್ಕೆ ಈ ಸ್ಪೋಟಕ ವಸ್ತುಗಳು ತಿರುಪುರದಲ್ಲಿ ತಯಾರಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಈ ಸ್ಪೋಟಕ ವಸ್ತುಗಳು ತಯಾರಾದ ಜಾಗ ಮತ್ತು ಖರೀದಿಸಿದ ವ್ಯಕ್ತಿಯ ಬಗ್ಗೆ ಈ ತಂಡಗಳು ಮಾಹಿತಿಗಳನ್ನು ಕಲೆಹಾಕುತ್ತಿದ್ದು, ಜಿಲೆಟಿನ್ ಕಡ್ಡಿಗಳು ದೊರೆತ ಬಸ್ ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೇರಾಗಳನ್ನು ಪರಿಶೀಲಿಸುತ್ತಿದ್ದಾರೆ.
ಬಸ್ ನಿಲ್ದಾಣದ ಬಳಿ 6 ಜಿಲೆಟಿನ್ ಕಡ್ಡಿಗಳು ಮತ್ತು 1 ಡಿಟೋನೇಟರ್ ಪತ್ತೆಯಾಗಿತ್ತು. ಈ ವಸ್ತುಗಳನ್ನು ಈ ಜಾಗಕ್ಕೆ ತಂದ ವ್ಯಕ್ತಿ ಭಯದಿಂದ ಇಟ್ಟು ಹೋಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಜಿಲೆಟಿನ್ ಮೇಲಿದ್ದ ವಿಳಾಸದ ಆಧಾರದ ಮೇಲೆ ತನಿಖೆ ತೀವ್ರಗೊಳಿಸಿದ್ದಾರೆ.
ಚಲನವಲನ ಸೆರೆ: ಬಸ್ ನಿಲ್ದಾಣದಲ್ಲಿರುವ ಸಿಸಿ ಕ್ಯಾಮೇರಾದಲ್ಲಿ ಅನುಮಾನಾಸ್ಪದ ವ್ಯಕ್ತಿಯ ಸಂಪೂರ್ಣ ಚಲನವಲನ ಸೆರೆಯಾಗಿದೆ.ಆ ದೃಶ್ಯಾವಳಿಯನ್ನು ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
- ಸಿಎಂ ತವರಿನಲ್ಲಿ ಮತ್ತೆ ಬಾಲ ಬಿಚ್ಚಿದ ಮೈಕ್ರೋ ಫೈನಾನ್ಸ್ ಕಂಪನಿಗಳು, ಸಾಲದ ಕಂತು ಕಟ್ಟದಿದ್ದಕ್ಕೆ ಮನೆ ಜಪ್ತಿ
- ಪಟೇಲ್ ಅವರ ಏಕೀಕೃತ ಭಾರತದ ಕನನು ಸನನಾಗಿಸಿದ್ದು ಪ್ರಧಾನಿ ಮೋದಿ : ಅಮಿತ್ ಶಾ
- ಸರ್ದಾರ್ ಪಟೇಲ್ 150ನೇ ಜನ್ಮ ದಿನಾಚರಣೆ : ಏಕತಾ ಪ್ರತಿಜ್ಞೆ ಬೋಧಿಸಿದ ಪ್ರಧಾನಿ ಮೋದಿ
- ಹೋಟೆಲ್ನಲ್ಲಿ ಸಿಕ್ಕಿದ 7 ಲಕ್ಷ ಮೌಲ್ಯದ ಚಿನ್ನದ ಸರ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಸಪ್ಲೇಯರ್
- ಜೆಟ್ಬ್ಲೂ ವಿಮಾನ ತುರ್ತು ಭೂಸ್ಪರ್ಶ, ಹಲವು ಪ್ರಯಾಣಿಕರಿಗೆ ಗಾಯ

