Saturday, June 7, 2025
Homeರಾಜ್ಯರಾಜ್ಯದಲ್ಲಿ 61 ಹೊಸ ಕೋವಿಡ್ ಕೇಸ್, ವೃದ್ಧ ಸಾವು

ರಾಜ್ಯದಲ್ಲಿ 61 ಹೊಸ ಕೋವಿಡ್ ಕೇಸ್, ವೃದ್ಧ ಸಾವು

61 new Covid cases in the state, elderly death

ಬೆಂಗಳೂರು, ಜೂ. 6- ಕೋವಿಡ್ ಸೋಂಕು ಪ್ರಕರಣಗಳ ಸಂಬಂಧ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 61 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಸಕ್ರೀಯ ಪ್ರಕರಣಗಳು ಶೇ 6.4 ರಷ್ಟು ವರದಿಯಾಗಿದ್ದು, 65 ವರ್ಷದ ವೃದ್ದರೊಬ್ಬರು ಸಾವನ್ನಪ್ಪಿದ್ದಾರೆ.

ನಿನ್ನೆ ಒಂದೇ ದಿನದಲ್ಲಿ 45 ಮಂದಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದು, 644 ಮಂದಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಅವರಲ್ಲಿ 566 ಮಂದಿ ಆರ್‌ಟಿಪಿಸಿಆರ್ ಪರೀಕ್ಷೆ ಮತ್ತು 796 ಮಂದಿಗೆ ಆರ್‌ಎಟಿ ಪರೀಕ್ಷೆಯನ್ನು ಮಾಡಲಾಗಿದೆ. ಒಟ್ಟು 5 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಜ.1 ರಿಂದ ಈವರೆಗೆ ಒಟ್ಟು 61ಕೋವಿಡ್ ಪ್ರಕರಣಗಳು ದಾಖಲಾಗಿವೆ.

ಈವರೆಗೆ 338 ಮಂದಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ ಹಾಗೂ ದಾವಣಗೆರೆಯಲ್ಲಿ 65 ವರ್ಷದ ವೃದ್ದರೊಬ್ಬರು ಆರೋಗ್ಯ ಸಮಸ್ಯೆಯಿಂದ ಮೇ 24 ರಂದು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

RELATED ARTICLES

Latest News