Thursday, November 21, 2024
Homeಬೆಂಗಳೂರುಬೆಂಗಳೂರಿನ ರಾಮಮಂದಿರದಲ್ಲಿ 63 ಅಡಿ ಎತ್ತರದ ಶ್ರೀರಾಮಾಂಜನೇಯ ಪ್ರತಿಮೆ ಅನಾವರಣ

ಬೆಂಗಳೂರಿನ ರಾಮಮಂದಿರದಲ್ಲಿ 63 ಅಡಿ ಎತ್ತರದ ಶ್ರೀರಾಮಾಂಜನೇಯ ಪ್ರತಿಮೆ ಅನಾವರಣ

63 feet tall statue of Sri Ramanjaney unveiled at Ram Mandir, Bangalore

ಬೆಂಗಳೂರು,ಅ.23- ರಾಜಾಜಿನಗರದ ಶ್ರೀರಾಮಮಂದಿರದಲ್ಲಿ ಶ್ರೀರಾಮ ಸೇವಾ ಮಂಡಳಿ ವತಿಯಿಂದ ಸ್ಥಾಪಿಸಲಾಗಿರುವ ಕರ್ನಾಟಕದ ಅತಿ ಎತ್ತರದ 63 ಅಡಿ ಉದ್ದದ ಶ್ರೀರಾಮಾಂಜನೇಯ ಪ್ರತಿಮೆಯನ್ನು ಅದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮಿಜಿ, ಶ್ರೀ ಸೌಮ್ಯನಾಥ ಶ್ರೀಗಳು ಹಾಗೂ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಲೋಕಾರ್ಪಣೆ ಮಾಡಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್. ಅಶ್ವಥ್ ನಾರಾಯಣ್ , ಶ್ರೀರಾಮಸೇವಾ ಮಂಡಳಿ ಅಧ್ಯಕ್ಷ ಶ್ರೀಧರ್, ಹೆಚ್.ಎಂ.ಕಷ್ಣಮೂರ್ತಿ, ಆರ್.ವಿ.ಹರೀಶ್, ಬಿಬಿಎಂಪಿ ಮಾಜಿ ಸದಸ್ಯರುಗಳಾದ ಮೋಹನ್ ಕುಮಾರ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ ಮನುಷ್ಯನ ಜೀವನ ಮೌಲ್ಯಯುತವಾಗಿ ಬದುಕಲು ಮತ್ತು ಲೋಕದಲ್ಲಿ ಜನರು ಆದರ್ಶವಾಗಿ ಜೀವನ ಸಾಗಿಸಲು ಶ್ರೀರಾಮ ಆದರ್ಶ ಮತ್ತು ತತ್ವವನ್ನು ಎಲ್ಲರೂ ಆಳವಡಿಸಿಕೊಳ್ಳಿ ಎಂದು ಕರೆ ನೀಡಿದರು.
ಹಿಂದೂ ಸಮಾಜ ಸಂರಕ್ಷಣೆ ಸಂಘಟನೆ ಒಗ್ಗಟಿಗೆ ಧರ್ಮ ಕಾರ್ಯಗಳು ನಡೆಯುತ್ತಿರಬೇಕು. ಎಲ್ಲರಿಗೂ ಶ್ರೀರಾಮನ ಮೂರ್ತಿ ಸ್ಪೂರ್ತಿಯಾಗಿದೆ ಎಂದರು.

ಪಿತವಾಕ್ಯ ಪರಿಪಾಲಕ, ಆದರ್ಶ ಪತಿ ಶ್ರೀರಾಮನನ್ನು ಮಾರ್ಯಾದ ಪುರುಷೋತ್ತಮ ಎಂದು ಕರೆಯುತ್ತಾರೆ ಅಂದರೆ ಜೀವನದಲ್ಲಿ ಯುವಕರು ತಂದೆ, ತಾಯಿಗೆ ಉತ್ತಮ ಮಗನಾಗಿ ಮತ್ತು ಸತಿಗೆ ಉತ್ತಮ ಪತಿಯಾಗಿ ಹಾಗೂ ಸಮಾಜದಲ್ಲಿ ಉತ್ತಮಪ್ರಜೆಯಾಗಿ ಜೀವನ ಸಾಗಿಸಲು ಪ್ರಭು ರಾಮ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದು ಅವರು ಹೇಳಿದರು.

ಶಿವಮೊಗ್ಗ ಜಿಲ್ಲೆಯ 29 ವರ್ಷದ ಶಿಲ್ಪಿ ಜೀವನ್ ಅವರು ಶ್ರೀ ರಾಮಾಂಜನೇಯ ಮೂರ್ತಿಯನ್ನು ಕೆತ್ತನೆ ಮಾಡಿದ್ದು, ಅವರು ತಮ ಚಿಕ್ಕ ವಯಸ್ಸಿನಲ್ಲಿ ಅದ್ಬುತ ಕಲಾವಿದ ಎಂದು ಕೀರ್ತಿಗಳಿಸಿದ್ದಾರೆ.ಅದರಲ್ಲಿ ಬಳ್ಳಾರಿಯಲ್ಲಿ 23 ಅಡಿ ಎತ್ತರದ ರಾಜ್ಯದ ಅತಿಡೊಡ್ಡ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ರವರ ಪ್ರತಿಮೆ, 51 ಅಡಿ ಎತ್ತರದ ಜಗದ್ಗುರು ಶ್ರೀ ರೇಣುಕಾಚಾರ್ಯರ ಪ್ರತಿಮೆ, ಶಿಕಾರಿಪುರದಲ್ಲಿ 62ಅಡಿ ಎತ್ತರದ ಚಾಮುಂಡೇಶ್ವರಿ ವಿಗ್ರಹ, ಚನ್ನಪಟ್ಟಣ ಗೌಡಗೆರೆ ಇದೀಗ ಶ್ರೀ ರಾಮಮಂದಿರದಲ್ಲಿ 63ಅಡಿಯ ರಾಜ್ಯದ ಅತಿಡೊಡ್ಡ ರಾಮಾಂಜನೇಯ ಮೂರ್ತಿಯನ್ನು ಅವರು ನಿರ್ಮಾಣ ಮಾಡಿದ್ದಾರೆ.

ಜೀವನ್ ರವರಿಗೆ ಅಮರ ಶಿಲ್ಪಿ ಜಕಣಾಚಾರಿ ಎಂಬ ಪ್ರಶಸ್ತಿಯನ್ನು ರಂಭಾಪುರಿ ಜಗದ್ಗುರುಗಳು ನೀಡಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲಿ ಶಿಲ್ಪಕಲೆಯಲ್ಲಿ ಅಪಾರ ಸಾಧನೆ ಮಾಡಿರುವ ಶಿಲ್ಪಿ ಜೀವನ್ ರವರು ಸಾಧನೆ ಕನ್ನಡಿಗರ ಹೆಮೆಯಾಗಿದೆ.

RELATED ARTICLES

Latest News