ಬೆಂಗಳೂರು,ನ. 19- ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ನಿವಾರಿಸುವ ಉದ್ದೇಶದಿಂದ ನಗರದ 66 ಸ್ಥಳಗಳಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ಲಾಟ್ ನಿರ್ಮಾಣ ಮಾಡಲು ಜಿಬಿಎ ಮುಂದಾಗಿದೆ.
ನಗರದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಬೇಕಾದರೆ ಅವಶ್ಯವಿರುವ ಕಡೆ ಪಾರ್ಕಿಂಗ್ ಲಾಟ್ ನಿರ್ಮಾಣ ಮಾಡುವುದು ಸೂಕ್ತ ಎಂದು ಸಂಚಾರಿ ಪೊಲೀಸರು ಮಾಡಿಕೊಂಡ ಮನವಿ ಮೇರೆಗೆ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ನಗರದ ಆಯಾಕಟ್ಟಿನ ಪ್ರದೇಶಗಳ 66 ಸ್ಥಳಗಳಲ್ಲಿ ಪಿಪಿಪಿ ಮಾಡೆಲ್ ಯೋಜನೆಯಡಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಾಂಪ್ಲೆಕ್‌್ಸನಿರ್ಮಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಹೆಚ್ಚು ವಾಹನ ದಟ್ಟಣೆಯ ಪ್ರದೇಶಗಳು, ಮೆಟ್ರೋ ಪಾರ್ಕಿಂಗ್ ಜಾಗ, ಜಂಕ್ಷನ್ ಗಳ ಸಮೀಪ ಹಾಗೂ ಸರ್ಕಾರಿ ಜಾಗಗಳಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ಕಾಂಪ್ಲೆಕ್ಸ್ ತಲೆ ಎತ್ತಲಿವೆ.. ಪ್ರತಿ ಪಾರ್ಕಿಂಗ್ ಲಾಟ್‌ನಲ್ಲಿ 485 ಕಾರುಗಳನ್ನು ಪಾರ್ಕ್ ಮಾಡುವಂತೆ ನಿರ್ಮಿಸಲಾಗುತ್ತಿದೆ.
ಏಳು ಲಿಫ್‌್ಟಗಳೊಂದಿಗೆ 9 ಮಹಡಿ ವಿನ್ಯಾಸದೊಂದಿಗೆ ನಿರ್ಮಿಸಲಾಗುವುದು. ಮಲ್ಟಿ ಲೆವೆಲ್ ಕಾರು ಪಾರ್ಕಿಂಗ್ ಯೋಜನೆ ನೆರೆಯ ಹೈದರಾಬಾದ್‌ನಲ್ಲಿ ಯಶಸ್ವಿಯಾಗಿರುವುದರಿಂದ ಅದೇ ಮಾದರಿಯನ್ನು ಬೆಂಗಳೂರಿನಲ್ಲಿ ಅನುಸರಿಸಲು ತೀರ್ಮಾನಿಸಿ ಇಂತಹ ನಿರ್ಧಾರ ಕೈಗೊಳ್ಳಲಾಗಿದೆ.
