ನಾಸಿಕ್,ಜು.17- ಕಾರು ಮತ್ತು ಮೋಟಾರ್‌ಬೈಕ್ ಡಿಕ್ಕಿ ಹೊಡೆದ ಪರಿಣಾಮ 2 ವರ್ಷದ ಮಗು ಸೇರಿದಂತೆ ಏಳು ಜನರು ಸಾವನ್ನಪ್ಪಿ ಹಲವಾರು ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದಿದೆ. ನಾಸಿಕ್‌ನಲ್ಲಿ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗವಹಿಸಿ ಸಂತ್ರಸ್ತರು ತಮ ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಮಧ್ಯರಾತ್ರಿಯ ಸುಮಾರಿಗೆ ಈ ದುರಂತ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ದೇವಿದಾಸ್ ಪಂಡಿತ್ ಗಂಗುರ್ಡೆ (28),ಮನೀಷಾ ದೇವಿದಾಸ್ ಗಂಗುರ್ಡೆ (23), ಭವೇಶ್ ದೇವಿದಾಸ್ ಗಂಗುರ್ಡೆ (2), ಉತ್ತಮ್ ಏಕನಾಥ್ ಜಾಧವ್ (42), ಅಲ್ಕಾ ಉತ್ತಮ್ ಜಾಧವ್ (38), ದತ್ತಾತ್ರೇಯ ನಾಮದೇವ್ ವಾಘಮಾರೆ (45), ಅನುಸೂಯಾ ದತ್ತಾತ್ರೇಯ ವಾಘಮಾರೆ (40) ಎಂದು ಗುರುತಿಸಲಾಗಿದೆ. ಇದರಲ್ಲಿ ದೇವಿದಾಸ್, ಮನೀಷಾ ಮತ್ತು ಭವೇಶ್ ಗಂಗುರ್ಡೆ ಒಂದೇ ಕುಟುಂಬದ ಸದಸ್ಯರಾಗಿದ್ದರು.
ಡಿಕ್ಕಿ ಹೊಡೆದ ನಂತರ ಮೋಟಾರ್ ಸೈಕಲ್‌ನಲ್ಲಿದ್ದ ಮಂಗೇಶ್ ಯಶವಂತ್ ಕುರ್ಘಾಡೆ (25) ಮತ್ತು ಅಜಯ್ ಜಗನ್ನಾಥ್ ಗೊಂಡ್ (18) ಗಾಯಗೊಂಡಿದ್ದು, ಪ್ರಸ್ತುತ ನಾಸಿಕ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಿಂಡೋರಿ ಪ್ರದೇಶದಲ್ಲಿ ಮಾರುತಿ ಆಲ್ಟೊ ಕಾರು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ರಸ್ತೆ ಬದಿಯ ಕಾಲುವೆಗೆ ಉರುಳಿ ಬಿದ್ದಿದೆ. ಮೃತರಲ್ಲಿ ಮೂವರು ಮಹಿಳೆಯರು, ಮೂವರು ಪುರುಷರು ಮತ್ತು ಕಾರಿನಲ್ಲಿದ್ದ ಒಂದು ಮಗು ಸೇರಿದೆ. ಮೋಟಾರ್ ಸೈಕಲ್‌ನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ.
ಡಿಕ್ಕಿಯ ನಂತರ ಆಲ್ಟೊ ಕಾರು ಕಾಲುವೆಗೆ ಬಿದ್ದಿದೆ. ನೀರಿನಲ್ಲಿ ಮುಳುಗಿದ ವಾಹನದೊಳಗೆ ಸಿಲುಕಿಕೊಂಡ ನಂತರ ಕಾರಿನಲ್ಲಿದ್ದ ಏಳು ಮಂದಿಯೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಯಾರೊಬ್ಬರೂ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೂಗು ಮತ್ತು ಬಾಯಿ ಒಳಗೆ ಹೆಚ್ಚಿನ ಪ್ರಮಾಣದ ನೀರು ಒಳಹೋಗಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-07-2025)
- ಬೆಂಗಳೂರಲ್ಲಿ ಇಂದು ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರ ಸಾವು
- ಶಾಲೆಗಳಿಗೆ ಬಾಂಬ್ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ : ಗೃಹಸಚಿವ ಪರಮೇಶ್ವರ
- ನೈರುತ್ಯ ಮುಂಗಾರು ಚೇತರಿಕೆ, ರಾಜ್ಯದ ಹಲವೆಡೆ ಮಳೆ
- 20 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ, ಬೆಚ್ಚಿ ಬಿದ್ದ ದೆಹಲಿ