Home ಇದೀಗ ಬಂದ ಸುದ್ದಿ ಮಿನಿ ಬಸ್‌‍ಗೆ ಟ್ರಕ್‌ ಡಿಕ್ಕಿ, ಏಳು ಮಂದಿ ಸಾವು

ಮಿನಿ ಬಸ್‌‍ಗೆ ಟ್ರಕ್‌ ಡಿಕ್ಕಿ, ಏಳು ಮಂದಿ ಸಾವು

0
ಮಿನಿ ಬಸ್‌‍ಗೆ ಟ್ರಕ್‌ ಡಿಕ್ಕಿ, ಏಳು ಮಂದಿ ಸಾವು

ಅಂಬಾಲ,ಮೇ 24- ಟ್ರಕ್‌ ಮಿನಿ ಬಸ್‌‍ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಏಳು ಜನರು ಸಾವನ್ನಪ್ಪಿ, ಸುಮಾರು 25 ಜನರು ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಹರಿಯಾಣದ ಅಂಬಾಲಾದಲ್ಲಿ ನಡೆದಿದೆ.

ಕುಂಡ್ಲಿ-ಮನೇಸರ್‌-ಪಲ್ವಾಲ್‌ (ಕೆಎಂಪಿ) ಎನ್ಸ್ ಪ್ರೆಸ್‌‍ ವೇಯಲ್ಲಿ ಸುಮಾರು 2 ಮೀ ದೂರದಲ್ಲಿ ಈ ಘಟನೆ ನಡೆದಿದೆ. ಬಸ್‌‍ನಲ್ಲಿ ಸುಮಾರು 60 ಜನರು ಇದ್ದರು, ಎಲ್ಲರೂ ಪಂಜಾಬ್‌ನ ಹೋಶಿಯಾರ್ಪುರ ಮತ್ತು ಲುಧಿಯಾನ ನಿವಾಸಿಗಳು.

ಇವರೆಲ್ಲರೂ ಮಥುರಾ ಮತ್ತು ವೃಂದಾವನದಿಂದ ಧಾರ್ಮಿಕ ತೀರ್ಥಯಾತ್ರೆಗಳನ್ನು ಮುಗಿಸಿ ಹಿಂತಿರುಗುತ್ತಿದ್ದರು. ಗಾಯಗೊಂಡವರೆಲ್ಲರೂ ಚೇತರಿಸಿಕೊಂಡಿದ್ದಾರೆ ಎಂದು ಸದರ್‌ ತೌರು ಠಾಣಾಧಿಕಾರಿ, ಇನ್ಸ್ ಪೆಕ್ಟರ್‌ ಜಿತೇಂದ್ರ ಕುಮಾರ್‌ ತಿಳಿಸಿದ್ದಾರೆ.

ಅಪಘಾತದ ನಂತರ ಚಾಲಕ ಕುಡಿದು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಅಪಘಾತದಲ್ಲಿ ಬದುಕುಳಿದವರು ತಿಳಿಸಿದ್ದಾರೆ. ಅಪಘಾತ ಸಂಭವಿಸಿದಾಗ ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ನಿದ್ರೆಯಲ್ಲಿದ್ದರು, ಮೃತರೆಲ್ಲಾ ಒಂದೇ ಕುಟುಂಬಕ್ಕೆ ಸೇರಿದವರು ಎಂದು ಅವರು ಹೇಳಿದ್ದಾರೆ.

ಕಳೆದ ವಾರವಷ್ಟೇ, ರಾಜ್ಯದ ನುಹ್‌ ಪ್ರದೇಶದಲ್ಲಿ ಟೂರಿಸ್ಟ್‌ ಬಸ್‌‍ಗೆ ಬೆಂಕಿ ಹೊತ್ತಿಕೊಂಡ ಒಂಬತ್ತು ಜನರು ಸಜೀವ ದಹನವಾಗಿದ್ದರು ಮತ್ತು 15 ಮಂದಿ ಗಾಯಗೊಂಡಿದ್ದರು.