Friday, October 18, 2024
Homeರಾಷ್ಟ್ರೀಯ | Nationalಕಾರು ಪಲ್ಟಿ : ಒಂದೇ ಕುಟುಂಬದ 7 ಮಂದಿ ಬಲಿ

ಕಾರು ಪಲ್ಟಿ : ಒಂದೇ ಕುಟುಂಬದ 7 ಮಂದಿ ಬಲಿ

7 killed in Telangana after car plunges into canal

ಹೈದರಾಬಾದ್,ಅ.17- ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಕಾರೊಂದು ಪಲ್ಟಿಯಾಗಿ ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿದ್ದಾರೆ. ಭೀಮ್ಲಾ ತಾಂಡಾದಲ್ಲಿ ವಾಸವಿದ್ದ ಕುಟುಂಬ ತೂಪ್ರಾಣದಿಂದ ವಾಪಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿ ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಈ ದುರಂತ ಸಂಭವಿಸಿದೆ.

ರಕ್ಷಣಾ ಕಾರ್ಯ ಕೈಗೊಂಡರೂ ದುರದೃಷ್ಟವಶಾತ್ ಅದಾಗಲೇ ಕುಟುಂಬದ ಎಲ್ಲಾ ಸದಸ್ಯರು ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಶಿವಂಪೇಟೆ ಪೊಲೀಸರು ಪ್ರಕರಣ ದಾಖಲಾಗಿದೆ.

ಘಟನೆಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸಂತಾಪ ವ್ಯಕ್ತಪಡಿಸಿದ್ದು, ಅಪಘಾತದಲ್ಲಿ ಒಂದೇ ಕುಟುಂಬದ ಏಳು ಮಂದಿ ಪ್ರಾಣ ಕಳೆದುಕೊಂಡಿರುವುದು ಬೇಸರದ ಸಂಗತಿ ಎಂದು ಹೇಳಿದ್ದಾರೆ. ರಸ್ತೆ ಅವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದು ಅಗತ್ಯ ನೆರವು ನೀಡುವಂತೆ ಅಽಕಾರಿಗಳಿಗೆ ಸೂಚನೆ ನೀಡಿದ್ದಾರೆ.

RELATED ARTICLES

Latest News