Saturday, May 10, 2025
Homeರಾಷ್ಟ್ರೀಯ | Nationalಕಾಶ್ಮೀರದ ಸಾಂಭಾದಲ್ಲಿ ಭಾರತದೊಳಗೆ ನುಸುಳಲೆತ್ನಿಸಿದ 7 ಉಗ್ರರ ಹತ್ಯೆ

ಕಾಶ್ಮೀರದ ಸಾಂಭಾದಲ್ಲಿ ಭಾರತದೊಳಗೆ ನುಸುಳಲೆತ್ನಿಸಿದ 7 ಉಗ್ರರ ಹತ್ಯೆ

7 Terrorists, Backed By Pak Rangers, Shot Dead Trying To Infiltrate Jammu

ನವದೆಹಲಿ, ಮೇ 9- ಅಕ್ರಮವಾಗಿ ಭಾರತಕ್ಕೆ ನುಸುಳುತ್ತಿದ್ದ ಜೈಶ್‌-ಎ-ಮೊಹಮ್ಮದ್‌ ಸಂಘಟನೆಯ 7 ಉಗ್ರರನ್ನು ಜಮ್ಮು ಮತ್ತು ಕಾಶ್ಮೀರದ ಸಾಂಭಾದಲ್ಲಿ ಹೊಡೆದುರುಳಿಸಲಾಗಿದೆ. ಹಲವು ಗಂಟೆಗಳ ಕಾಲ ನಡೆದ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಪ್ರಮುಖ ಒಳನುಸುಳುವಿಕೆ ಪ್ರಯತ್ನವನ್ನು ಬಿಎಸ್‌‍ಎಫ್‌ ವಿಫಲಗೊಳಿಸಿದೆ.

ಅಂತಾರಾಷ್ಟ್ರೀಯ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿದ್ದಾಗ ಬಿಎಸ್‌‍ಎಫ್‌ ಯೋಧರು ಗುಂಡಿಕ್ಕಿ ಏಳು ಉಗ್ರರನ್ನು ಕೊಂದಿದ್ದಾರೆ ಎಂದು ಬಿಎಸ್‌‍ಎಫ್‌ ತನ್ನ ಎಕ್‌್ಸ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಜಮ್ಮು, ರಾಜಸ್ಥಾನ ಮತ್ತು ಪಂಜಾಬ್‌ನ ಅಮೃತಸರ ಸೇರಿ ಭಾರತದ 15 ನಗರಗಳನ್ನು ಗುರಿಯಾಗಿಸಿ ಪಾಕಿಸ್ತಾನ ಮಿಸೈಲ್‌, ಡ್ರೋನ್‌ ದಾಳಿ ನಡೆಸಿತು. ಭಾರತೀಯ ಸೇನೆ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ. ಪಾಕ್‌ನ ಎಲ್ಲಾ ಮಿಸೈಲ್‌ಗಳನ್ನು ಹೊಡೆದುರುಳಿಸಲಾಗಿದೆ.

RELATED ARTICLES

Latest News