Monday, October 27, 2025
Homeಬೆಂಗಳೂರುಬಾಡಿಗೆ ಮನೆಯಲ್ಲಿ ವಾಸವಾಗಿದ್ದ 71 ವೃದ್ಧೆ ಆತ್ಮಹತ್ಯೆ

ಬಾಡಿಗೆ ಮನೆಯಲ್ಲಿ ವಾಸವಾಗಿದ್ದ 71 ವೃದ್ಧೆ ಆತ್ಮಹತ್ಯೆ

71-year-old woman living in rented house commits suicide

ಬೆಂಗಳೂರು,ಅ.27– ಕಬ್ಬಿಣದ ಮೆಟ್ಟಿಲಿನ ಸರಳುಗಳಿಗೆ ವೃದ್ಧೆ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವ ಘಟನೆ ಕುಂಬಳಗೋಡು ಪೊಲೀಸ್‌‍ ಠಾಣೆ ವ್ಯಾಪ್ತಿಯ ಚಲ್ಲಘಟ್ಟದಲ್ಲಿ ನಡೆದಿದೆ.
ಲೀಲಾವತಿ(71) ಆತಹತ್ಯೆಗೆ ಶರಣಾದ ವೃದ್ಧೆ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಲೀಲಾವತಿ ಅವರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ಕಿರಿಯ ಮಗಳು ನೆಲಮಹಡಿಯಲ್ಲಿ ವಾಸವಾಗಿದ್ದಾರೆ.

ನಿನ್ನೆ ಊಟ ಕೊಡಲೆಂದು ಮಗಳು ಹೋದಾಗ ಲೀಲಾವತಿಯವರು ಕಾಣಲಿಲ್ಲ. ನಂತರ ಮಹಡಿಯ ಮೇಲೆ ಹೋಗಿ ನೋಡಿದಾಗ, ವಾಟರ್‌ ಟ್ಯಾಂಕ್‌ಗೆ ಹೋಗಲು ಹಾಕಲಾಗಿದ್ದ ಕಬ್ಬಿಣದ ಮೆಟ್ಟಿಲುಗಳ ಸರಳಿಗೆ ಲೀಲಾವತಿಯವರು ಸೀರೆ ಬಿಗಿದು ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ.

- Advertisement -

ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕುಂಬಳಗೋಡು ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಶವವನ್ನು ಆಸ್ಪತ್ರೆಗೆ ಸಾಗಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

- Advertisement -
RELATED ARTICLES

Latest News