Tuesday, July 8, 2025
Homeರಾಷ್ಟ್ರೀಯ | National73.72 ಲಕ್ಷ ರೂ ವಂಚಿಸಿದ ಡೇಟಿಂಗ್‌ ಆ್ಯಪ್‌ನಲ್ಲಿ ಪರಿಚಯವಾಗಿದ್ದ ಮಹಿಳೆ..!

73.72 ಲಕ್ಷ ರೂ ವಂಚಿಸಿದ ಡೇಟಿಂಗ್‌ ಆ್ಯಪ್‌ನಲ್ಲಿ ಪರಿಚಯವಾಗಿದ್ದ ಮಹಿಳೆ..!

₹73.72 lakh gone! Elderly man in Mumbai meets woman on dating app

ಥಾಣೆ, ಜು.7- ಡೇಟಿಂಗ್‌ ಆ್ಯಪ್‌ ಮೂಲಕ ಭೇಟಿಯಾದ ಮಹಿಳೆಯೊಬ್ಬರು ಹೆಚ್ಚಿನ ಆದಾಯದ ಆಮಿಷವೊಡ್ಡಿ ಚಿನ್ನದ ವ್ಯಾಪಾರಕ್ಕೆ ಆಮಿಷವೊಡ್ಡಿ ವ್ಯಕ್ತಿಗೆ 73.72 ಲಕ್ಷ ರೂ ವಂಚಿಸಿರುವ ಘಟನೆ ಇಲ್ಲಿ ವರದಿಯಾಗಿದೆ. ಕಳೆದ 2024 ಮಾರ್ಚ್‌ ಮತ್ತು ಮೇ ನಡುವೆ ಈ ಘಟನೆ ನಡೆದಿದೆ.

ಡೇಟಿಂಗ್‌ ಆ್ಯಪ್‌ ಮೂಲಕ ನ್ಯೂ ಪನ್ವೇಲ್‌ ಪ್ರದೇಶದಲ್ಲಿ ವಾಸಿಸುವ 62 ವರ್ಷದ ವ್ಯಕ್ತಿಯೊಂದಿಗೆ ಮಹಿಳೆ ಸಂಪರ್ಕ ಸಾಧಿಸಿದಳು.ಆರಂಭಿಕ ಸಂವಹನಗಳ ನಂತರ, ಇಬ್ಬರೂ ವಾಟ್ಸಾಪ್‌ನಲ್ಲಿ ಚಾಟ್‌ ಮಾಡುವುದನ್ನು ಮುಂದುವರೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಮಯದಲ್ಲಿ ತನ್ನನ್ನು ಜಿಯಾ ಎಂದು ಗುರುತಿಸಿಕೊಂಡ ಮಹಿಳೆ ಚಿನ್ನದ ವ್ಯಾಪಾರ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಆಮಿಷವೊಡ್ಡಿದಳು ಎಂದು ಖಂಡೇಶ್ವರ ಪೊಲೀಸ್‌‍ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಿಳೆ ಹೆಚ್ಚಿನ ಆದಾಯದ ಭರವಸೆ ನೀಡಿ ನಿರ್ದಿಷ್ಟ ವ್ಯಾಪಾರ ಅರ್ಜಿಯನ್ನು ಕಳುಹಿಸಿ ಬರ್ತಿ ಮಾಡಲು ಮನವೊಲಿಸಿದರು. ನಂತರ ವ್ಯಕ್ತಿಯಿಂದ ಮೂರು ತಿಂಗಳ ಅವಧಿಯಲ್ಲಿ 73.72 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದಳು ಎಂದು ಅಧಿಕಾರಿ ಹೇಳಿದರು.ಆದಾಗ್ಯೂ, ನಂತರ ಯಾವುದೇ ರಿಟರ್ನ್‌್ಸ ಜಮಾ ಆಗದಿದ್ದಾಗ,ದುರುದಾರರು ಅನುಮಾನಗೊಂಡಿದ್ದಾರೆ.

ಹೂಡಿಕೆ ಮಾಡಿದ ಹಣದ ಬಗ್ಗೆ ವಿಚಾರಿಸಲು ಪ್ರಯತ್ನಿಸಿದಾಗ, ಮಹಿಳೆ ಪ್ರತಿಕ್ರಿಯಿ ನಿಲ್ಲಿಸಿದರು ಮತ್ತು ಅಂತಿಮವಾಗಿ ಸಂಪರ್ಕ ಕಡಿತಗೊಂಡಿತ್ತು ಎಂದು ಅಧಿಕಾರಿ ಹೇಳಿದರು.ಪ್ರಕರಣ ದಾಖಲಿಸಿ ವಹಿವಾಟು ಹಾಗು ಆರೋಪಿ ಪತ್ತೆಹಚ್ಚಲು ಮುಂದಾಗಿದ್ದಾರೆ.

RELATED ARTICLES

Latest News