ಬೆಂಗಳೂರು, ಅ.6- ಬಿಜೆಪಿ ಯನ್ನು ಪರ್ಸೆಂಟೇಜ್ ಸರ್ಕಾರ ಎಂದು ಬಿಂಬಿಸಿ ಯಶಸ್ವಿಯಾಗಿ ರಾಜ್ಯದಲ್ಲಿ ಸರ್ಕಾರ ರಚಿಸಿರುವ ಕಾಂಗ್ರೆಸ್ನಲ್ಲೂ ಭ್ರಷ್ಟಾಚಾರ ಮುಂದು ವರೆದಿದೆಯಾ..? ಉದ್ಯಮಿ ಮೋಹನ್ ದಾಸ್ ಪೈ ಅವರು ಮಾಡಿರುವ ಎಕ್ಸ್ ನಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಪುರಾಣ ಬಯಲು ಮಾಡುವುದರ ಜೊತೆಗೆ ಭಾರಿ ಸಂಚಲನ ಸೃಷ್ಟಿಸಿದೆ.
ಅದರಲ್ಲೂ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿದ್ದ ಶೇ.40 ಕಮೀಷನ್ ಆರೋಪಕ್ಕೆ ಬದಲಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಶೇ.75 ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವುದು ಅವರ ಎಕ್ಸ್ ಪೋಸ್ಟ್ನಿಂದ ಗೊತ್ತಾಗಿದೆ. ಪೈ ಅವರು ಮಾಡಿರುವ ಎಕ್್ಸನ ಪೋಸ್ಟ್ ವಿಪಕ್ಷಗಳಿಗೆ ಬಾಯಿಗೆ ಆಹಾರವಾಗುವ ಸಾಧ್ಯತೆಗಳಿವೆ.
ಬಿಜೆಪಿ ವಿರುದ್ಧ ಶೇ. 40ರಷ್ಟು ಕಮೀಷನ್ ಆರೋಪ ಮಾಡಿದ್ದ ಕಾಂಗ್ರೆಸ್ನವರು ಭ್ರಷ್ಟಾಷಾರ ಮಾಡೋದಿಲ್ಲ ಅಂತ ಹೇಳಿ ಅಧಿಕಾರಕ್ಕೆ ಬಂದಿದ್ದರೂ ಇದೀಗ ಅವರ ಸರ್ಕಾರದಲ್ಲೂ ಭ್ರಷ್ಟಾಚಾರದ ಆರೋಪ ಕೇಳಿ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಸರ್ಕಾರ ಇರುವ ರಾಜ್ಯದ 12 ಇಲಾಖೆಗಳಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಪೈ ಅವರು ಎಕ್ಸ್ ಮಾಡಿ ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಪ್ರಮಾಣದ ಲಂಚವಾತಾರ ನಡೆತಿದೆ ಎನ್ನುವ ಮಾಹಿತಿ ಹಂಚಿಕೊಂಡಿದ್ದಾರೆ.
ಯಾವ್ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಭ್ರಷ್ಟಾಚಾರ; ಪೈ ಅವರ ಎಕ್ಸ್ ಖಾತೆ ಪ್ರಕಾರ ಅಬಕಾರಿ ಅಧಿಕಾರಿಗಳು ಶೇ. 38, ಇಂಧನ ಇಲಾಖೆ ಅಧಿಕಾರಿಗಳು ಶೇ. 41, ಸಾರಿಗೆ ಇಲಾಖೆಯಲ್ಲಿ ಶೇ. 42, ಪೊಲೀಸ್ ಇಲಾಖೆಯಲ್ಲಿ ಶೆ. 43, ಅಗ್ನಿ ಶಾಮಕ ದಳದಲ್ಲಿ ಶೇ. 45, ಆದಾಯ ತೆರಿಗೆ ಇಲಾಖೆಯಲ್ಲಿ ಶೇ. 47, ಮಹಾನಗರ ಪಾಲಿಕೆಗಳಲ್ಲಿ ಶೇ. 57, ಮಾಲಿನ್ಯ ನಿಯಂತ್ರಣ ಇಲಾಖೆಯಲ್ಲಿ ಶೇ. 59, ಜಿಎಸ್ಟಿ ಕಚೇರಿಗಳಲ್ಲಿ ಶೇ. ನೋಂದಣಿ ಇಲಾಖೆಗಳಲ್ಲಿ ಶೇ. 68, ಕಾರ್ಮಿಕ/ ಪಿಎಫ್ ಕಚೇರಿಗಳಲ್ಲಿ ಶೇ. 69 ಹಾಗೂ ಇತರ ಕೆಲ ಇಲಾಖೆಳಲ್ಲಿ ಶೇ.75 ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ.