Wednesday, December 18, 2024
Homeಜಿಲ್ಲಾ ಸುದ್ದಿಗಳು | District Newsಚಿಕ್ಕಬಳ್ಳಾಪುರ | Chikkaballapurಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇಗುಲದಲ್ಲಿ 75 ಲಕ್ಷ ಕಾಣಿಕೆ ಹಣ ಸಂಗ್ರಹ

ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇಗುಲದಲ್ಲಿ 75 ಲಕ್ಷ ಕಾಣಿಕೆ ಹಣ ಸಂಗ್ರಹ

75 lakhs of donations collected at Sri Kshetra Ghati Subrahmanya Temple

ದೊಡ್ಡಬಳ್ಳಾಪುರ,ಡಿ.17- ಶ್ರೀ ಕ್ಷೇತ್ರ ಘಾಟಿ ಸುಬ್ರಹಣ್ಯ ದೇಗುಲದಲ್ಲಿ ಹುಂಡಿ ಕಾಣಿಕೆ ಎಣಿಕೆ ಮಾಡಲಾಗಿದ್ದು, 75ಲಕ್ಷ ಹಣ ಸಂಗ್ರಹವಾಗಿದೆ.ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಘಾಟಿ ಸುಬ್ರಹಣ್ಯ ದೇವರ ಹುಂಡಿಯಲ್ಲಿ ಹಾಕಲಾಗಿದ್ದ ಕಾಣಿಕೆಯನ್ನು ನಿನ್ನೆ ಎಣಿಕೆ ಮಾಡಲಾಯಿತು. ಹುಂಡಿ ಎಣಿಕೆಯಲ್ಲಿ ಒಟ್ಟು 75, 30, 068ರೂ. ಮೊತ್ತ ಸಂಗ್ರಹವಾಗಿದೆ.

ಇದರೊಂದಿಗೆ 76,500 ರೂ ಮೌಲ್ಯದ 02 ಕೆಜಿ 250 ಗ್ರಾಂ ಬೆಳ್ಳಿ, 18900 ರೂ ಮೌಲ್ಯದ 3 ಗ್ರಾ.600 ಮಿಲಿ ತೂಕದ ಚಿನ್ನವನ್ನು ಭಕ್ತರು ಹುಂಡಿಯಲ್ಲಿ ಹಾಕುವ ಮೂಲಕ ಹರಕೆ ತೀರಿಸಿದ್ದಾರೆ.ಹುಂಡಿಯನ್ನು ನಿಯಮಾನುಸಾರ ತೆಗೆದು ಎಣಿಸಲಾಗಿದ್ದು, ಎಣಿಕೆ ಕಾರ್ಯದಲ್ಲಿ ದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳು ಭಾಗವಹಿಸಿದ್ದರು.

ಈ ವೇಳೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ.ನಾರಾಯಣಸ್ವಾಮಿ, ಮುಜರಾಯಿ ಇಲಾಖೆ ತಹಶೀಲ್ದಾರ್‌ ಜಿ.ಜೆ. ಹೇಮಾವತಿ, ಪ್ರಧಾನ ಅರ್ಚಕ ಆರ್‌ ಸುಬ್ರಹಣ್ಯ, ದೇವಾಲಯದ ಸಿಬ್ಬಂದಿ ನಂಜಪ್ಪ ಹಾಗೂ ದೇವಾಲಯದ ಸಿಬ್ಬಂದಿಗಳು ಹಾಗೂ ಕೆನರಾ ಬ್ಯಾಂಕ್‌ ಸಿಬ್ಬಂದಿ ಪೊಲೀಸ್‌‍ ಇಲಾಖೆ ಹಾಗೂ ದೇವಾಲಯಕ್ಕೆ ಬಂದ ಭಕ್ತಾದಿಗಳ ಹಾಜರಿದ್ದರು.

RELATED ARTICLES

Latest News