Friday, November 22, 2024
Homeರಾಜ್ಯರಾಜ್ಯದಲ್ಲಿ 2ನೇ ಹಂತದ ಚುನಾವಣೆಯಲ್ಲಿ 70.41 ರಷ್ಟು ಮತದಾನ

ರಾಜ್ಯದಲ್ಲಿ 2ನೇ ಹಂತದ ಚುನಾವಣೆಯಲ್ಲಿ 70.41 ರಷ್ಟು ಮತದಾನ

ಬೆಂಗಳೂರು, ಮೇ 7- ರಾಜ್ಯದ 2ನೇ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ಬಿರುಸಿನಿಂದ ಆರಂಭಗೊಂಡು ಬಹುತೇಕ ಶಾಂತಿಯುತವಾಗಿ ನಡೆಯಿತು. ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿತು. ಹಲವು ಮತಗಟ್ಟೆಗಳಲ್ಲಿ ಸಾಲುಗಟ್ಟಿ ನಿಂತು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದ ದೃಶ್ಯ ಕಂಡುಬಂತು.

ಸಂಜೆ 5 ಗಂಟೆ ವೇಳೆಗೆ ಸರಾಸರಿ ಶೇ.66.05ರಷ್ಟು ಮತದಾನವಾಗಿ, ಮತದಾನ ಮಕ್ತಾಯದ ವೇಳೆಗೆ ಶೇ.70.41 ಮತದಾನವಾಗಿದ್ದು,ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆಯುವ ಮತದಾರರು ಉತ್ಸಾಹದಿಂದ ಮತದಾನ ಮಾಡುತ್ತಿರುವುದು ಅಲ್ಲಲ್ಲಿ ಕಂಡುಬಂದಿತು. ಕೆಲವೊಂದು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಈತನಕ ಶಾಂತಿಯುತವಾಗಿ ಮತದಾನ ನಡೆದಿದೆ.

ಗ್ರಾಮೀಣ ಭಾಗದಲ್ಲಿ ಬಿರುಸಿನ ಮತದಾನವಾಗುತ್ತಿರುವುದು ಕಂಡುಬಂದಿತು. ನಗರ ಪ್ರದೇಶಗಳಲ್ಲಿ ಅಷ್ಟು ಉತ್ಸಾಹ ಕಂಡುಬರಲಿಲ್ಲ. ಗ್ರಾಮೀಣ ಭಾಗದಲ್ಲಿ ಕೃಷಿ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಬೇಕಾದವರು ಬೆಳಗ್ಗೆಯೇ ಮತ ಚಲಾಯಿಸಿ ತಮ ಕೆಲಸ ಕಾರ್ಯಗಳಿಗೆ ತೆರಳಿದರು.

21 ಮಹಿಳೆಯರು ಸೇರಿದಂತೆ ಒಟ್ಟು 227 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಿದ್ದಾರೆ. ಇಬ್ಬರು ಕೇಂದ್ರ ಸಚಿವರು, ಇಬ್ಬರು ಮಾಜಿ ಮುಖ್ಯಮಂತ್ರಿಗಳು, ನಾಲ್ವರು ಸಚಿವರ ಮಕ್ಕಳು, ಓರ್ವ ಸಚಿವರ ಸಹೋದರಿ, ಸಚಿವರೊಬ್ಬರ ಪತ್ನಿ, ಹಾಲಿ ಸಂಸದರ ಪತ್ನಿ ಹಾಗೂ ರಾಷ್ಟ್ರೀಯ ಪಕ್ಷವೊಂದರ ರಾಷ್ಟ್ರೀಯ ಅಧ್ಯಕ್ಷರ ಅಳಿಯ ಚುನಾವಣಾ ಕಣದಲ್ಲಿ ಇದ್ದಾರೆ.

ಬೆಳಗ್ಗೆ ಬಿರುಸಿನಿಂದ ಆರಂಭಗೊಂಡ ಮತದಾನವು ಮಧ್ಯಾಹ್ನ ಸ್ವಲ್ಪ ಕಡಿಮೆಯಾದರೂ 4 ಗಂಟೆ ನಂತರ ಮತ್ತೆ ಮತದಾನ ಬಿರುಸಾಗತೊಡಗಿತು. ಬಿಸಿಲು ಹೆಚ್ಚಾಗಿರುವುದರಿಂದ ಮತಗಟ್ಟೆಗಳಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.

ಹಿರಿಯರು,ವಿಶೇಷ ಚೇತನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದು ವಿಶೇಷವಾಗಿತ್ತು ಕೆಲವರನ್ನು ಮತಗಟ್ಟೆಗೆ ಹೊತ್ತು ತಂದು ಮಾತದಾನ ಮಾಡಿಸಿದ್ದು ಭಾರಿ ಪ್ರಶಂಸೆಗೆ ಪಾತ್ರವಾಗಿತ್ತು .ಮೊದಲ ಭಾರಿಗೆ ಮತದಾನ ಮಾಡುವ ಯುವ ಸಮುದಾಯದಲ್ಲಿ ಲವಲವಿಕೆ ಕಂಡುಬಂತು ಮತದಾನ ಮಾಡಿದ ಖುಷಿಯಲ್ಲಿ ಮಾಧ್ಯಮಗಳ ಮುಂದೆ ಸಮತಸ ಹಂಚಿಕೊಂಡರು.

ಒಟ್ಟಾರೆ 3 ತಿಂಗಳಿನಿಂದ ನಡೆದಿದ್ದ ತಂತ್ರ-ಪ್ರತಿ ತಂತ್ರ ,ನಾಯಕರ ನಡುವಿನ ಆರೋಪ -ಪ್ರತ್ಯಾರೋಪ ,ಅಬ್ಬರದ ಪ್ರಚಾರ ಕೊನೆಯಾಗಿದ್ದು ಮತದಾರ ಫ್ರಭು ತನ್ನ ಹಕ್ಕು ಚಲಾಯಿಸಿದ್ದು ಜೂನ್‌ 4ರ ವರೆಗೆ ಜನದೇಶಕ್ಕೆ ಕಾಯಬೇಕಾಗಿದೆ.ರಾಜ್ಯದ 28 ಕ್ಷೇತ್ರದ ಮತದಾನ ಅಧಿಕೃತವಾಗಿ ಮುಕ್ತಾಯವಾಗಿದೆ.

ಇಂದು ನಡೆದ 14 ಕ್ಷೇತ್ರಗಳಲ್ಲಿ ಒಟ್ಟು 2,59,52,958 ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದರು. ಇದರಲ್ಲಿ 1,29,48,978 ಪುರುಷರು, 1,29,66,570 ಮಹಿಳೆಯರು, 1945 ತೃತೀಯ ಲಿಂಗಿಗಳಿದ್ದಾರೆ. 6,90,929 ಯುವ ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದರು.

14 ಕ್ಷೇತ್ರಗಳಲ್ಲಿ ಒಟ್ಟು 28,269 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಮುಕ್ತ ಹಾಗೂ ಶಾಂತಿಯುತ ಮತದಾನಕ್ಕೆ ಅನುಕೂಲವಾಗುವಂತೆ ಸೂಕ್ತ ಪೊಲೀಸ್‌‍ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು.

1.45 ಲಕ್ಷ ಮತಗಟ್ಟೆ ಅಧಿಕಾರಿಗಳು, 35,000 ಪೊಲೀಸರು, ಅರೆಸೇನಾ ಪಡೆಯ 65 ಕಂಪನಿಗಳನ್ನು ನಿಯೋಜಿಸಲಾಗಿತ್ತು. ಸಂಜೆ 6 ಗಂಟೆವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಎಡಗೈ ತೋರುಬೆರಳಿಗೆ ಶಾಯಿಯನ್ನು ಹಾಕಲಾಗುತ್ತಿತ್ತು. ಏ.26ರಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಸರಾಸರಿ ಶೇ. 69.56ರಷ್ಟು ಮತದಾನವಾಗಿದೆ.

RELATED ARTICLES

Latest News