ಬೆಂಗಳೂರು,ಸೆ.14- ರಾಜ್ಯದಲ್ಲಿ ಆಗಸ್ಟ್ ತಿಂಗಳಿನಲ್ಲಿ 7,978.19 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹವಾಗಿದೆ. ಇದು ಕಳೆದ ಜುಲೈ ತಿಂಗಳಿಗಿಂತ ಹೆಚ್ಚು ಸಂಗ್ರಹವಾಗಿದೆ. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ 6935.46 ಕೋಟಿ ರೂ. ಸಂಗ್ರಹಿಸಲಾಗಿತ್ತು. ಈ ವರ್ಷ 7,978.19 ಕೋಟಿ ಸಂಗ್ರಹಿಸಲಾಗಿದೆ.
ಜುಲೈ ತಿಂಗಳಿನಲ್ಲಿ ಒಟ್ಟು 7,971.73 ಕೋಟಿ ವಾಣಿಜ್ಯ ತೆರಿಗೆ ಸಂಗ್ರಹವಾಗಿತ್ತು. ಕಳೆದ ನಾಲ್ಕು ತಿಂಗಳಿನಿಂದ ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ನಿರಂತರ ಏರಿಕೆ ಕಂಡುಬಂದಿದೆ.ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಒಟ್ಟಾರೆ 40,812.69 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ.
ಇದರಲ್ಲಿ ಸರಕು ಸೇವಾ ತೆರಿಗೆ 30,989.73 ಕೋಟಿ ರೂ. ಕರ್ನಾಟಕ ಮಾರಾಟ ತೆರಿಗೆ 9,264.99 ಕೋಟಿ ರೂ. ಹಾಗೂ ವೃತ್ತಿ ತೆರಿಗೆ 566.97 ಕೋಟಿ ರೂ. ಸಂಗ್ರಹಿಸಿದಂತಾಗಿದೆ.ಆಗಸ್ಟ್ ತಿಂಗಳಿನಲ್ಲಿ ಸರಕು ಸೇವಾ ತೆರಿಗೆ 5,946.91 ಕೋಟಿ ಕರ್ನಾಟಕ ಮಾರಾಟ ತೆರಿಗೆ 1943.23 ಕೋಟಿ ಹಾಗೂ ವೃತ್ತಿ ತೆರಿಗೆ 88.05 ಕೋಟಿ ರೂ. ಸಂಗ್ರಹಿಸಲಾಗಿದೆ.
ಜುಲೈಗೆ ಹೋಲಿಸಿದರೆ ಈ ಮೂರು ತೆರಿಗೆಗಳಲ್ಲೂ ಹೆಚ್ಚಳ ಕಂಡುಬಂದಿದೆ. ಕಳೆದ 2023-24 ಆರ್ಥಿಕ ಸಾಲಿನಲ್ಲಿ 94,363.27 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿತ್ತು.