Friday, October 3, 2025
Homeಬೆಂಗಳೂರುದಂಪತಿ, ಕಾರು ಚಾಲಕನ ಅಪಹರಿಸಿ 1 ಕೋಟಿ ನಗದು ದೋಚಿದ್ದ 8 ಆರೋಪಿಗಳ ಬಂಧನ

ದಂಪತಿ, ಕಾರು ಚಾಲಕನ ಅಪಹರಿಸಿ 1 ಕೋಟಿ ನಗದು ದೋಚಿದ್ದ 8 ಆರೋಪಿಗಳ ಬಂಧನ

8 accused arrested for kidnapping couple, car driver and robbing them of Rs 1 crore

ಬೆಂಗಳೂರು,ಸೆ.28– ದಂಪತಿ ಹಾಗೂ ಕಾರು ಚಾಲಕನನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿ ಹಲ್ಲೆ ಮಾಡಿ 1.1 ಕೋಟಿ ನಗದನ್ನು ದೋಚಿದ್ದ 8 ಮಂದಿ ಆರೋಪಿಗಳನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ಸಂಜೆ ಆರ್‌ಆರ್‌ನಗರದ ಅಡಿಕೆ ವ್ಯಾಪಾರಿ ಮೋಹನ್‌ ಅವರು ತಮ ಕಾರು ಚಾಲಕ ಹೇಮಂತ್‌ ಅವರಿಗೆ ಎಲೆಕ್ಟ್ರಾನಿಕ್‌ಸಿಟಿಗೆ ಹೋಗಿ ಹಣ ತರುವಂತೆ ತಿಳಿಸಿದ್ದಾರೆ. ಅದರಂತೆ ಹೇಮಂತ್‌ ಅವರು ಸಂಜೆ 6 ಗಂಟೆ ಸಂದರ್ಭದಲ್ಲಿ ಹುಳಿಮಾವು ಠಾಣಾ ವ್ಯಾಪ್ತಿಯ ಅಕ್ಷಯನಗರದ ಅಕ್ಷಯ ಪಾರ್ಕ್‌ ಬಳಿ ತೆರಳಿ ಮಾಲೀಕರು ನೀಡಿದ್ದ ಮೊಬೈಲ್‌ ನಂಬರಿಗೆ ಕರೆ ಮಾಡಿದ್ದಾರೆ.

ನಂತರ ಕರೆ ಸ್ವೀಕರಿಸಿದ ರಿಯಲ್‌ ಎಸ್ಟೇಟ್‌ ಉದ್ಯಮಿ ಮೋಟರಾಮ್‌ ಅವರು ತಮ ಪತ್ನಿಯೊಂದಿಗೆ ಕಾರಿನಲ್ಲಿ ಅಲ್ಲಿಗೆ ಹೋಗಿದ್ದಾರೆ. ನಂತರ ಅವರೊಂದಿಗೆ ಸಂಭಾಷಣೆ ನಡೆಸಿ ಕಾರಿನ ಹಿಂಬದಿಯಲ್ಲಿ ಹಣ ಇರುವುದಾಗಿ ತಿಳಿಸಿದ್ದಾರೆ. ಈ ವೇಳೆ ಇಬ್ಬರು ಆರೋಪಿಗಳು ಏಕಾಏಕಿ ಕಾರಿನ ಬಳಿ ಬಂದು ನಿಮನ್ನು ತಪಾಸಣೆ ಮಾಡಬೇಕು. ಕೆಳಗೆ ಇಳಿಯಿರಿ ವಿಡಿಯೋ ಮಾಡುತ್ತೇವೆ ಎಂದು ಹೇಳಿದ್ದಾರೆ. ಒಬ್ಬ ಮೊಬೈಲ್‌ನಿಂದ ಕಾರನ್ನು ಚಿತ್ರೀಕರಿಸಿದರು. ನಂತರ ದಂಪತಿ ಅವರನ್ನು ಪ್ರಶ್ನಿಸಿದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಎಚ್ಚೆತ್ತ ದಂಪತಿ ಕಾರಿನ ಬಾಗಿಲನ್ನು ಲಾಕ್‌ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ಹೋಗುವಾಗ ಬೈಕ್‌ನಲ್ಲಿ ಹಿಂಬಾಲಿಸಿದ ಆರೋಪಿಗಳು ಕಾರಿಗೆ ಗುದ್ದಿದ್ದಾರೆ. ನಂತರ ನಿರ್ಜನ ಪ್ರದೇಶಕ್ಕೆ ಬಲವಂತವಾಗಿ ಕಾರನ್ನು ಸಾಗಿಸಿ ನಿಲ್ಲಿಸಿದ್ದಾರೆ.

RELATED ARTICLES

Latest News