ಬೆಂಗಳೂರು,ಫೆ.20- ಪ್ರಸಕ್ತ ವರ್ಷ 8 ಐಎಎಸ್ ಅಧಿಕಾರಿಗಳು, 9 ಐಎಫ್‌ಎಸ್ ಅಧಿಕಾರಿಗಳು ಹಾಗೂ ಇಬ್ಬರು ಐಪಿಎಸ್ ಅಧಿಕಾರಿಗಳು ವಯೋ ನಿವೃತ್ತಿ ಹೊಂದಲಿದ್ದಾರೆ. ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ ಅಧಿಸೂಚನೆ ಪ್ರಕಾರ ಐಎಎಸ್ ಅಧಿಕಾರಿಯಾದ ಎಲ್.ಕೆ.ಅತೀಕ್ ಕಳೆದ ಜ.31 ರಂದು ವಯೋನಿವೃತ್ತಿ ಹೊಂದಿದ್ದಾರೆ. ಆದರೆ ರಾಜ್ಯ ಸರ್ಕಾರ ಮರುನೇಮಕ ಮಾಡಿ ಸೇವೆಯನ್ನು ಮುಂದುವರೆಸಿದೆ.
ಪ್ರಸ್ತುತ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಅತೀಕ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಐಎಎಸ್ ಅಧಿಕಾರಿಗಳಾದ ಜಯವಿಭವ ಸ್ವಾಮಿ ಹಾಗೂ ಮಾ 31 ರಂದು, ಎಸ್.ಆರ್.ಉಮಾಶಂಕರ್ ಏ 30 ರಂದು, ಎನ್.ಜಯರಾಂ ಮೇ 31, ಅತಿಲ್‌ಕುಮಾರ್ ತಿವಾರಿ, ಜಿ.ಸತ್ಯವತಿ, ಅಜಯ್ ಸೇರ್ ಅವರು ಜೂ.30 ರಂದು ಹಾಗೂ ನಿಲಯ ಮಿತಾಶ್ ಅವರು ಡಿ.31 ರಂದು ವಯೋನಿವೃತ್ತಿ ಹೊಂದಲಿದ್ದಾರೆ..
ಐಪಿಎಸ್ ಅಧಿಕಾರಿಗಳಾದ ಮಾಲಿನಿ ಕೃಷ್ಣಮೂರ್ತಿ ಜು.31 ರಂದು, ಬಿ.ಎಸ್.ಲೋಕೇಶ್ ಕುಮಾರ್ ಏ 30 ರಂದು ವಯೋನಿವೃತ್ತಿ ಹೊಂದಲಿದ್ದಾರೆ. ಐಎಫ್‌ಎಸ್ ಅಧಿಕಾರಿಗಳಾದ ಬ್ರಿಜೇಶ್ ಕುಮಾರ್ ದೀಕ್ಷಿತ್, ವಿಜಯ ಶರ್ಮ ಅವರು ಜ 31 ರಂದು ಈಗಾಗಲೇ ನಿವೃತ್ತಿ ಹೊಂದಿದ್ದಾರೆ.
ಸುಭಾಷ್ ಕೆ. ಮಾಲಕ್ ಹೆಗ್ಡೆ ಜೂ 30 ರಂದು, ಸೀಮಾ ಗಾರ್ಗ್ ಜು 31ರಂದು, ಜಗಮೋಹನ್ ಶರ್ಮ ಸೆ 30, ಬ್ರಿಜೇಶ್ ಕುಮಾರ್ ಮೇ 31, ಯತೀಶ್‌ಕುಮಾರ್ ಆ 31, ರಾಜಣ್ಣ ಫೆ 28, ಉದಯ್ ಕುಮಾರ್ ಜೋಗಿ ಡಿ 31 ರಂದು ನಿವೃತ್ತಿಯಾಗಲಿದ್ದಾರೆ.