Thursday, September 18, 2025
Homeರಾಷ್ಟ್ರೀಯ | Nationalಕಾಮುಕನ ಕಾಮತೃಷೆಗೆ ಬಲಿಯಾದ 85 ವರ್ಷದ ವೃದ್ಧೆ..!

ಕಾಮುಕನ ಕಾಮತೃಷೆಗೆ ಬಲಿಯಾದ 85 ವರ್ಷದ ವೃದ್ಧೆ..!

ಬರೇಲಿ,ಜು.30- ಕಾಮುಕನ ಅಟ್ಟಹಾಸಕ್ಕೆ 85 ವರ್ಷದ ವಯೋವೃದ್ದೆ ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರಪ್ರದೇಶದ ಹಫೀಜ್‌ಗಂಜ್‌ನಲ್ಲಿ ನಡೆದಿದೆ.ಮನೆಯಲ್ಲಿ ಒಂಟಿಯಾಗಿದ್ದ ವೃದ್ಧೆ ಮೇಲೆ ಅತ್ಯಾಚಾರ ನಡೆಸಿ ಆಕೆಯ ಸಾವಿಗೆ ಕಾರಣನಾದ ನೆರೆಮನೆಯ ರಾಕೇಶ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಪತಿ ಮತ್ತು ಮಗ ಮತಪಟ್ಟ ನಂತರ ಸಂತ್ರಸ್ತೆ ಒಂಟಿಯಾಗಿ ವಾಸವಾಗಿದ್ದರು ಎಂದು ಹಿರಿಯ ಪೊಲೀಸ್‌‍ ವರಿಷ್ಠಾಧಿಕಾರಿ ಅನುರಾಗ್‌ ಆರ್ಯ ತಿಳಿಸಿದ್ದಾರೆ. ಮಹಿಳೆಯ ಸಹೋದರ ಮತ್ತು ಅತ್ತಿಗೆ ನೆರೆಹೊರೆಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರ ಸೊಸೆ ಅವರೊಂದಿಗೆ ವಾಸಿಸುತ್ತಿದ್ದಾರೆ.

ಸೊಸೆಯ ಪ್ರಕಾರ, ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಂತ್ರಸ್ತೆಯ ಮನೆಗೆ ಹೋದಾಗ, ರಾಕೇಶ್‌ ತನ್ನ ಅತ್ತೆಯ ಮೇಲೆ ಅತ್ಯಾಚಾರವೆಸಗುತ್ತಿರುವುದನ್ನು ಕಂಡು ದಿಗ್ಭಮೆಗೊಂಡಳು ಎಂದು ಆರ್ಯ ಹೇಳಿದರು.

ಅತ್ತಿಗೆ ಎಚ್ಚರಿಕೆ ನೀಡಿದಾಗ ಆರೋಪಿ ಪರಾರಿಯಾಗಿದ್ದು, ಮನೆಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಏತನಧ್ಯೆ, ದಾಳಿಯ ನಂತರ ವದ್ಧೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯು ಮದ್ಯವ್ಯಸನಿಯಾಗಿದ್ದು, ಆತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಆರ್ಯ ತಿಳಿಸಿದ್ದಾರೆ. ಮಹಿಳೆಯ ಮರಣೋತ್ತರ ಪರೀಕ್ಷೆ ನಡೆಸುವಂತೆ ಸಮಿತಿಗೆ ಸೂಚಿಸಲಾಗಿದೆ.

RELATED ARTICLES

Latest News