Friday, June 6, 2025
Homeರಾಷ್ಟ್ರೀಯ | Nationalವ್ಯಾನ್ ಮೇಲೆ ಸಿಮೆಂಟ್ ಟ್ರಕ್‌ ಹರಿದು ಒಂದೇ ಕುಟುಂಬದ ಒಂಬತ್ತು ಮಂದಿ ಸಾವು

ವ್ಯಾನ್ ಮೇಲೆ ಸಿಮೆಂಟ್ ಟ್ರಕ್‌ ಹರಿದು ಒಂದೇ ಕುಟುಂಬದ ಒಂಬತ್ತು ಮಂದಿ ಸಾವು

9 killed after truck carrying cement overturns, rams van in Madhya Pradesh

ಝಬುವಾ ಜೂನ್ 4-ಮಧ್ಯಪ್ರದೇಶದ ಝಬುವಾ ಜಿಲ್ಲೆಯಲ್ಲಿ ಬೆಳಗಿನ ಜಾವ ಸಿಮೆಂಟ್ ತುಂಬಿದ ಟ್ರಕ್‌ ವೊಂದು ಪ್ರಯಾಣಿಕರ ವ್ಯಾನ್ ಮೇಲೆ ಉರುಳಿಬಿದ್ದ ಪರಿಣಾಮ ಒಂದೇ ಕುಟುಂಬಕ್ಕೆ ಸೇರಿದ ಒಂಬತ್ತು ಜನರು ಸಾವನ್ನಪ್ಪಿದ್ದಾರೆ.

ಮದುವೆ ಕಾರ್ಯಕ್ರಮದಿಂದ ಹಿಂತಿರುಗುತ್ತಿದ್ದಾಗ ಬೆಳಗಿನ ಜಾವ 2.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಮೇಘನಗರ ತಹಸಿಲ್ ಪ್ರದೇಶದ ಸಂಜೆಲಿ ರೈಲ್ವೆ ಕ್ರಾಸಿಂಗ್ ಬಳಿ ತಾತ್ಕಾಲಿಕ ರಸ್ತೆಯ ಮೂಲಕ ನಿರ್ಮಾಣ ಹಂತದಲ್ಲಿರುವ ರೈಲು ಮೇಲೇತುವೆ (ಆರ್‌ಒಬಿ) ದಾಟುತ್ತಿದ್ದ ಟ್ರಕ್ ಸಮತೋಲನ ತಪ್ಪಿ ವ್ಯಾನ್ ಮೇಲೆ ಉರುಳಿದೆ ಎಂದು ಝಬುವಾ ಪೊಲೀಸ್ ವರಿಷ್ಠಾಧಿಕಾರಿ ಪದವಿಲೋಚನ್ ಶುಕ್ಲಾ ತಿಳಿಸಿದ್ದಾರೆ.

ಅಪಘಾತದಲ್ಲಿ ಒಂಬತ್ತು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಘಟನೆ ಕುರಿತಂತೆ ತನಿಖೆ ನಡೆದಿದೆ ಎಂದು ಹೇಳಿದರು.

RELATED ARTICLES

Latest News