ರಾಯಿಪುರ : ಛತ್ತೀಸ್‌ಗಢದ ನಕ್ಸಲ್ ಪೀಡಿತ ಪ್ರದೇಶವಾದ ಬಿಜಾಪುರದಲ್ಲಿ ನಕ್ಸಲಿಯರು ಅಟ್ಟಹಾಸ ಮೆರೆದಿದ್ದು ಭದ್ರತಾ ಸಿಬ್ಬಂದಿ ತೆರಳುತ್ತಿದ್ದ ವಾಹನನ್ನು ಸ್ಪೋಟಿಸಿದ್ದಾರೆ. ಘಟನೆಯಲ್ಲಿ ಸುಮಾರು 9 ಮಂದಿ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದು ಅನೇಕರು ಗಾಯಗೊಂಡಿದ್ದಾರೆ.
ಕಾರ್ಯಾಚರಣೆ ಕೈಗೊಂಡು ವಾಪಸ್ ಬರುವಾಗ ಬಿಜಾಪುರ ಜಿಲ್ಲೆಯ ಬೇದ್ರೆ – ಕುತೃ ರಸ್ತೆಯಲ್ಲಿ ಎಲ್ಲದಡಿ ಅಡಗಿಸಿಟ್ಟಿದ್ದ ಐಇಡಿ ಸ್ಪೋಟಗೊಂಡು ವಾಹನ ಚಿತ್ರಗೊಂಡಿದೆ.
ಛತ್ತೀಸ್ಗಡದ ಬಸ್ತಾರ ಪ್ರದೇಶದಲ್ಲಿ ವರ್ದತಾ ಪಡೆಗಳು ಇತ್ತೀಚಿಗೆ ನಡೆಸಿದ್ದ ಎನ್ಕೌಂಟರ್ ನಲ್ಲಿ ಐವರ ಹತರಾಗಿದ್ದರು. ಇದರ ಪ್ರತೀಕಾರವಾಗಿ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ.
ತಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು ಹೆಚ್ಚುವರಿ ಪಡೆಗಳನ್ನು ರವಾನಿಸಲಾಗಿದೆ ಮತ್ತು ನಕ್ಸಲ್ ಶೋಧ ಕಾರ್ಯಾಚರಣೆ ನಡೆಯುತ್ತಿದೆ.