ವಾಷಿಂಗ್ಟನ್, ನ. 3 (ಪಿಟಿಐ) ಕಳೆದ ಒಂದು ವರ್ಷದಲ್ಲಿ ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸಿದ 96 ಸಾವಿರ ಭಾರತೀಯರನ್ನ ಬಂಧಿಸಲಾಗಿದೆ ಎಂದು ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ದತ್ತಾಂಶದಲ್ಲಿ ಬಹಿರಂಗಗೊಂಡಿದೆ. ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (ಯುಸಿಬಿಪಿ) ದತ್ತಾಂಶದ ಪ್ರಕಾರ 2022 ರ ಅಕ್ಟೋಬರ್ ಮತ್ತು 2023 ರ ಸೆಪ್ಟೆಂಬರ್‍ವರೆಗೆ ದಾಖಲೆಯ 96,917 ಭಾರತೀಯರನ್ನು ಅಕ್ರಮವಾಗಿ ಯುಎಸ್‍ಗೆ ದಾಟುವಾಗ ಬಂಧಿಸಲಾಗಿದೆಯಂತೆ.
ಕಾನೂನುಬಾಹಿರವಾಗಿ ಯುಎಸ್ ಗಡಿಯನ್ನು ದಾಟುತ್ತಿದ್ದಾಗ ಬಂಧಿತರಾದ ಭಾರತೀಯರು ಕಳೆದ ವರ್ಷಗಳಲ್ಲಿ ಐದು ಪಟ್ಟು ಹೆಚ್ಚಳವನ್ನು ಕಂಡಿದೆ ಎಂದು ವರದಿಯಾಗಿದೆ. 2019-20ರಲ್ಲಿ 19,883 ಭಾರತೀಯರನ್ನು ಬಂಧಿಸಲಾಗಿದೆ. 2020-21ರಲ್ಲಿ 30,662 ಭಾರತೀಯರನ್ನು ಬಂಧಿಸಲಾಗಿದ್ದು, 2021-22ರಲ್ಲಿ ಈ ಸಂಖ್ಯೆ 63,927 ಆಗಿತ್ತು ಎಂದು ಅಂಕಿಅಂಶಗಳು ತಿಳಿಸಿವೆ.
ಹಿಂದೂ ದೇವರುಗಳ ಆಶ್ಲೀಲ ಚಿತ್ರ ಮಾರಾಟ ಮಾಡುತ್ತಿದ್ದವನ ಬಂಧನ
ಅಕ್ಟೋಬರ್ 2022 ಮತ್ತು ಸೆಪ್ಟೆಂಬರ್ ನಡುವೆ ಬಂಧಿಸಲಾದ 96,917 ಭಾರತೀಯರಲ್ಲಿ 30,010 ಕೆನಡಾದ ಗಡಿಯಲ್ಲಿ ಮತ್ತು 41,770 ಮೆಕ್ಸಿಕೊ ಗಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಬಂಧಿತರನ್ನು ನಾಲ್ಕು ವರ್ಗಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ – ಜೊತೆಗಿರುವ ಅಪ್ರಾಪ್ತ ವಯಸ್ಕರು, ಕುಟುಂಬ ಘಟಕದಲ್ಲಿರುವ ವ್ಯಕ್ತಿಗಳು, ಒಂಟಿ ವಯಸ್ಕರು ಮತ್ತು ಜೊತೆಯಲ್ಲಿಲ್ಲದ ಮಕ್ಕಳು ಎಂದು ಗುರುತಿಸಲಾಗಿದೆ.
ಒಂಟಿ ವಯಸ್ಕರು ದೊಡ್ಡ ವರ್ಗವನ್ನು ಮಾಡುತ್ತಾರೆ. 2023 ರ ಆರ್ಥಿಕ ವರ್ಷದಲ್ಲಿ, 84,000 ಭಾರತೀಯ ವಯಸ್ಕರು ಅಕ್ರಮವಾಗಿ ಯುಎಸ್ ಅನ್ನು ದಾಟಿದ್ದಾರೆ. ಬಂಧಿತರಲ್ಲಿ 730 ಅಪ್ರಾಪ್ತ ವಯಸ್ಕರು ಸೇರಿದ್ದಾರೆ.