ಬೆಂಗಳೂರು,ಜ.5- ಬೆಂಗಳೂರಿನ ನಾಗರಿಕರ ಅಹವಾಲುಗಳನ್ನು ಇತ್ಯರ್ಥಪಡಿಸಲು ನಡೆಯುತ್ತಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಯಲಹಂಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಬಿಜೆಪಿಯ ಶಾಸಕರಾದ ಯಲಹಂಕದ ಎಸ್.ಆರ್.ವಿಶ್ವನಾಥ್, ದಾಸರಹಳ್ಳಿ ಮುನಿರಾಜು ಅವರು ಡಿ.ಕೆ.ಶಿವಕುಮಾರ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಿದರು.
ಎಸ್.ಆರ್.ವಿಶ್ವನಾಥ್ ಮಾತನಾಡಿ, ವ್ಯವಸ್ಥಿತವಾಗಿ ಜನಸ್ಪಂದನ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್‍ರವರು ವಾರದಿಂದ 10 ದಿನಗಳೊಳಗಾಗಿ ಜನರ ಸಮಸ್ಯೆಗೆ ಪರಿಹಾರ ದೊರಕಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಶಾಸಕ ಮುನಿರಾಜು ಅಕಾರ ಸಿಕ್ಕಾಗ ಜನ ನೆನಪಿಸಿಕೊಳ್ಳುವಂತಹ ಶಾಶ್ವತ ಕೆಲಸ ಮಾಡಬೇಕು. ಬೆಂಗಳೂರಿಗೆ ಕಾವೇರಿ ನೀರು ಪೂರೈಸಲು ಚಿಂತನೆ ನಡೆದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ದೇವರಾಜು ಅರಸುರವರನ್ನು ಮಂಡ್ಯದಲ್ಲಿ ರೈತರು ಮುತ್ತಿಗೆ ಹಾಕಿ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋದರೆ ರೈತರಿಗೆ ಅನ್ಯಾಯವಾಗಲಿದೆ ಎಂದು ಒತ್ತಡ ಹೇರಿದರು.
ಕಾರಿನಿಂದ ಇಳಿದ ದೇವರಾಜು ಅರಸು, ಅರ್ಧಗಂಟೆ ಕಾಲ ನಡೆದುಕೊಂಡು ಹೋಗಿ ಬೇರೆ ವಾಹನದಲ್ಲಿ ಪ್ರಯಾಣ ಮುಂದುವರೆಸಿದರು. ಏನೇ ಆದರೂ ಬೆಂಗಳೂರಿಗೆ ನೀರು ಕೊಡುತ್ತೇನೆ ಎಂದು ಪ್ರಕಟಿಸಿದರು. ಅದರ ಪರಿಣಾಮ ನಾವು ಇಂದು ಕಾವೇರಿ ನೀರು ಕುಡಿಯುತ್ತಿದ್ದೇವೆ. ಡಿ.ಕೆ.ಶಿವಕುಮಾರ್ ಅವರಿಗೆ ಅದೇ ರೀತಿಯ ಶಾಶ್ವತ ಕೆಲಸ ಮಾಡುವ ಧೈರ್ಯ, ತಾಕತ್ತು, ಇಚ್ಛಾ ಶಕ್ತಿ ಇದೆ. ಬೆಂಗಳೂರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಸಿ ಎಂದು ಸಲಹೆ ನೀಡಿದರು.
ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಜನರ ಮೂಲಭೂತ ಸಮಸ್ಯೆಗಳನ್ನ ಬಗೆಹರಿಸುವುದು ಬಹಳ ಮುಖ್ಯವಾಗಿದೆ. ಅಭಿವೃದ್ಧಿಯ ಜೊತೆಗೆ ಜನರ ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ನೀಡಿದಾಗ ಮಾತ್ರ ಸರ್ಕಾರ ಜನಪರವಾಗಿರಲು ಸಾಧ್ಯಎಂದರು.
15 ಮಂದಿ ಭಾರತೀಯರಿದ್ದ ಹಡಗು ಸೊಮಾಲಿಯಾ ಕರಾವಳಿಯಲ್ಲಿ ಅಪಹರಣ
ಜನಸ್ಪಂದನದಲ್ಲಿ ನಾನಾರೀತಿಯ ಸಮಸ್ಯೆಗಳು ಕೇಳಿಬಂದವು. ವ್ಯಕ್ತಿಯೊಬ್ಬರು ನನ್ನ ನಿವೇಶನ ಬಿಡಿಎಗೆ ಸ್ವಾೀಧಿನವಾಗಿದೆ. 30 ವರ್ಷದಿಂದ ನಾನು ವಾಸವಿದ್ದೇನೆ. ನನ್ನ ಜಾಗ ನನಗೆ ಉಳಿಸಿಕೊಡಿ ಎಂದು ಮನವಿ ಮಾಡಿದರು. ಈ ವೇಳೆ ನೀನು ಇರುವಲ್ಲಿಯೇ ಬಿಗಿಯಾಗಿರು, ಜಾಗ ಬಿಡಬೇಡ ಎಂದು ಉಪಮುಖ್ಯಮಂತ್ರಿ ಸಲಹೆಯೊಂದಿಗಿನ ಭರವಸೆ ನೀಡಿದರು.
ಈ ಹಿಂದೆ ಸಂಪಿಗೆಹಳ್ಳಿಯಲ್ಲಿನ ಪೊಲೀಸ್ ಅಧಿಕಾರಿಯೊಬ್ಬರು ನನ್ನ ಹೆಸರಿನಲ್ಲಿ ಸಾಲ ಪಡೆದು ವಂಚನೆ ಮಾಡುತ್ತಿದ್ದಾರೆ. ಕೇಳಿದರೆ ಏನು ಬೇಕಾದರೂ ಮಾಡಿಕೊ ಎನ್ನುತ್ತಾರೆ ಎಂದು ಮತ್ತೊಬ್ಬರು ದೂರು ಹೇಳಿದರು.
ನಾಗರತ್ನ ಎಂಬ ಮಹಿಳೆ ನಾನು ಬಡವಿ. ಬಿಪಿಎಲ್ ಕಾರ್ಡ್‍ಗಾಗಿ ಹಲವು ಬಾರಿ ಮನವಿ ಮಾಡಿದ್ದೇನೆ. ಶಾಸಕರ ಕಚೇರಿಗೂ ಹೋಗಿದ್ದೆ. ಆದರೂ ಪ್ರಯೋಜನವಾಗಿಲ್ಲ ಎಂದು ದುಃಖಿಸಿದರು. ಅಳಬೇಡಮ್ಮಾ, ನಾನಿದ್ದೇನೆ, ಬಿಪಿಎಲ್ ಕಾರ್ಡ್ ಮಾಡಿಸಿಕೊಡುತ್ತೇನೆಂದು ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
ಮಹಿಳೆಯೊಬ್ಬರು ತಮ್ಮ ಮನೆಗೆ ವಿದ್ಯುತ್ ಸಂಪರ್ಕ ಇಲ್ಲ ಎಂದು ಹೇಳಿದರು. ಅಕಾರಿಗಳನ್ನು ಮನೆಬಾಗಿಲಿಗೆ ಕಳುಹಿಸುತ್ತೇನೆಂದು ಡಿ.ಕೆ.ಶಿವಕುಮಾರ್ ಆಶ್ವಾಸನೆ ನೀಡಿದರು. ಕೆಂಪೇಗೌಡ ಪ್ರಶಸ್ತಿ ನೀಡಿ ಎಂದು ಕಲಾವಿದರೊಬ್ಬರು ಮನವಿ ಸಲ್ಲಿಸಿದರು. ಬಹಳಷ್ಟು ಮಂದಿ ಮೌಖಿಕವಾಗಿ ದೂರು ನೀಡಿದಾಗ ಏನೇ ಹೇಳುವುದಿದ್ದರೂ ಅದನ್ನು ಲಿಖಿತವಾಗಿ ದೂರು ನೀಡಿ ಎಂದು ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು.