Saturday, November 23, 2024
Homeಬೆಂಗಳೂರು2023ರಲ್ಲಿ ಜೀವನ್ಮರಣ ಹೋರಾಟದ ಸಂದರ್ಭಗಳಿಗಾಗಿ 22 ಬಾರಿ ಗ್ರೀನ್ ಕಾರಿಡಾರ್ ವ್ಯವಸ್ಥೆ

2023ರಲ್ಲಿ ಜೀವನ್ಮರಣ ಹೋರಾಟದ ಸಂದರ್ಭಗಳಿಗಾಗಿ 22 ಬಾರಿ ಗ್ರೀನ್ ಕಾರಿಡಾರ್ ವ್ಯವಸ್ಥೆ

ಬೆಂಗಳೂರು,ಜ.5- ತುರ್ತು ಚಿಕಿತ್ಸೆ, ಅಂಗಾಂಗ ಕಸಿ, ಜೀವಂತ ಹೃದಯ ಮತ್ತು ಲಿವರ್ ಸಾಗಿಸಲು ಸೇರಿದಂತೆ ಜೀವನ್ಮರಣ ಹೋರಾಟದ ಸಂದರ್ಭಗಳಲ್ಲಿ ಆಂಬುಲೆನ್ಸ್ ಗಳಿಗೆ ಕಳೆದ ವರ್ಷ(2023)ದಲ್ಲಿ 22 ಬಾರಿ ಗ್ರೀನ್ ಕಾರಿಡಾರ್ ಸಂಚಾರಿ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ದೇಶದ ಪ್ರಮುಖ 5 ನಗರಗಳಲ್ಲಿ ಅತ್ಯಾಧುನಿಕ ವೈದ್ಯಕೀಯ ಆಸ್ಪತ್ರೆ ಸೌಲಭ್ಯಗಳನ್ನು ಒಳಗೊಂಡಿರುವ ಬೆಂಗಳೂರು ನಗರದ ಆಸ್ಪತ್ರೆಗಳಿಗೆ ಹೊರದೇಶಗಳಿಂದ ಹಾಗೂ ಹೊರರಾಜ್ಯಗಳಿಂದ ತುರ್ತು ಚಿಕಿತ್ಸೆ ಪಡೆಯಲು ವಿಮಾನ ಸೇರಿದಂತೆ ರಸ್ತೆ ಮಾರ್ಗಗಳನ್ನು ಬಳಸುತ್ತಾರೆ. ಅಂತಹ ಸಂದರ್ಭದಲ್ಲಿ ಅವರ ಸುಗಮ ಸಂಚಾರಕ್ಕೆ ಬೆಂಗಳೂರು ನಗರ ಪೊಲೀಸರು 22 ಬಾರಿ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿ ಅವರು ಸಂಚರಿಸುವ ಮಾರ್ಗದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿ ಯಾವುದೇ ರೀತಿಯ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.

ಉತ್ತರ ಪ್ರದೇಶದ ಸರ್ಕಾರಿ ಬಸ್‍ಗಳಲ್ಲಿ ರಾಮ ಭಜನೆ

ಇದೇ ಸಂದರ್ಭದಲ್ಲಿ ಪ್ರತಿ ದಿನ ಸುಮಾರು 500 ಕ್ಕೂ ಹೆಚ್ಚು ಆಂಬುಲೆನ್ಸ್‍ಗಳಿಗೆ ಆದ್ಯತೆ ಮೇರೆಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಏಪ್ರಿಲ್ 30 ರಂದು ಕೆಂಪೇಗೌಡ ಇಂಟರ್‍ನ್ಯಾಷನಲ್ ಏರ್‍ಪೆಪೋರ್ಟ್‍ನಿಂದ ಮಣಿಪಾಲ್ ಆಸ್ಪತ್ರೆಗೆ ರೋಗಿಯನ್ನು ಸಾಗಿಸಲು 40 ಕಿ.ಮೀ. ದೂರವನ್ನು 35 ನಿಮಿಷದಲ್ಲಿ ಕ್ರಮಿಸಿದೆ. ಅಕ್ಟೋಬರ್ 15 ರಂದು ಅಪೋಲೊ ಆಸ್ಪತ್ರೆ ಎಸ್.ಎಸ್.ಪುರಂ ನಿಂದ ಸ್ಪರ್ಶ ಆಸ್ಪತ್ರೆ ಆರ್.ಆರ್.ನಗರಕ್ಕೆ ಹೃದಯವನ್ನು 12 ಕಿ.ಮೀ. ದೂರವನ್ನು 30 ನಿಮಿಷದಲ್ಲಿ ಕ್ರಮಿಸಿ ಸಾಗಿಸಲಾಗಿದೆ.

ಬೆಂಗಳೂರು ನಗರದಲ್ಲಿ ಸರಾಸರಿ ಪ್ರತಿ ತಿಂಗಳು ಸುಮಾರು 3 ಸಾವಿರದಂತೆ ಒಟ್ಟು 37,716 ಆಂಬುಲೆನ್ಸ್ ಟ್ರಿಪ್‍ಗಳನ್ನು ದಾಖಲಿಸಲಾಗಿದೆ. ಸಂಚಾರಿ ಪೊಲೀಸರ ಈ ಕಾರ್ಯವು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿರುತ್ತದೆ.

ಉತ್ತರ ಪ್ರದೇಶದ ಸರ್ಕಾರಿ ಬಸ್‍ಗಳಲ್ಲಿ ರಾಮ ಭಜನೆ

ಆಂಬುಲೆನ್ಸ್ ಡ್ರೈವರ್‍ಗೆ ತುರ್ತು ಸಂದರ್ಭದಲ್ಲಿ ಎಲ್ಲಿಂದೆಲ್ಲಿಗೆ ಹೋಗುತ್ತಿದ್ದಾರೆ ಎಂಬ ಬಗ್ಗೆ 112ಗೆ ಕರೆ ಮಾಡಿ ತಿಳಿಸಿದರೆ ಸಂಚಾರಿ ಪೊಲೀಸರು ಆದ್ಯತೆ ನೀಡಿ ಆಂಬುಲೆನ್ಸ್‍ಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಸಂಚಾರ ವಿಭಾಗದ ವತಿಯಿಂದ ಆಂಬುಲೆನ್ಸ್‍ಗಳ ಸಂಚಾರ ಮತ್ತು ಸಾರ್ವಜನಿಕರು ರಸ್ತೆಯಲ್ಲಿ ಹೇಗೆ ಸಹಕರಿಸಬೇಕು ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಂದೇಶಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Latest News