Monday, November 25, 2024
Homeರಾಜ್ಯಬೆಂಗಳೂರಲ್ಲಿ ಹೆಚ್ಚಾಯ್ತು ಹುಸಿ ಬಾಂಬ್ ಕರೆಗಳು ಹಾಗೂ ಸಂದೇಶಗಳ ಸರಣಿ

ಬೆಂಗಳೂರಲ್ಲಿ ಹೆಚ್ಚಾಯ್ತು ಹುಸಿ ಬಾಂಬ್ ಕರೆಗಳು ಹಾಗೂ ಸಂದೇಶಗಳ ಸರಣಿ

ಬೆಂಗಳೂರು,ಜ.6- ನಗರದಲ್ಲಿ ಆಗಿಂದಾಗ್ಗೆ ಹುಸಿ ಬಾಂಬ್ ಕರೆಗಳು, ಇಮೇಲ್ ಸಂದೇಶಗಳು ಬರುತ್ತಿದ್ದು, ನಾಗರಿಕರು ಆತಂಕಕ್ಕೆ ಒಳಗಾಗಿದ್ದಾರೆ. ನಿನ್ನೆ ಒಂದೇ ದಿನ ಮೂರು ಸ್ಥಳಗಳಿಗೆ ಹುಸಿ ಬಾಂಬ್ ಕರೆಗಳು ಬಂದಿದ್ದು, ದುಷ್ಕರ್ಮಿಗಳು ಬಾಂಬ್ ಸ್ಪೋಟಿಸುವ ಬೆದರಿಕೆ ಹಾಕಿರುತ್ತಾರೆ.

ಹೈಗ್ರೌಂಡ್ಸ್ ಠಾಣೆ:
ಅರಮನೆ ರಸ್ತೆಯಲ್ಲಿರುವ ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಾಲಯಕ್ಕೆ ನಿನ್ನೆ ಇಮೇಲ್‍ನಲ್ಲಿ , ಬಾಂಬ್ ಇಡಲಾಗಿದೆ. ಅದು ಕೆಲವೇ ನಿಮಿಷಗಳಲ್ಲಿ ಸ್ಪೋಟಗೊಳ್ಳುತ್ತದೆ ಎಂಬ ಸಂದೇಶ ಬಂದಿದೆ. ತಕ್ಷಣ ಕಲಾ ಸಂಗ್ರಹಾಲಯದವರು ಪೊಲೀಸರಿಗೆ ತಿಳಿಸಿದ್ದಾರೆ. ಹೈಗ್ರೌಂಡ್ ಠಾಣೆ ಪೆಪೊಲೀಸರು, ಬಾಂಬ್ ನಿಷ್ಕ್ರಿಯದಳ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅದು ಬೆದರಿಕೆ ಸಂದೇಶ ಎಂಬುದು ಗೊತ್ತಾಗಿ ನಿಟ್ಟಿಸಿರು ಬಿಟ್ಟಿದ್ದಾರೆ. ಈ ಬಗ್ಗೆ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಧಾನಸೌಧ: ಜವಹರ್‍ಲಾಲ್ ನೆಹರು ತಾರಾಲಯಕ್ಕೆ ಬಾಂಬ್ ಇಡಲಾಗಿದೆ ಎಂಬ ಇಮೇಲ್ ಸಂದೇಶದಿಂದ ಆತಂಕಗೊಂ ತಾರಾಲಯ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಪೊಲೀಸರು ಬಂದು ಪರಿಶೀಲಿಸಿದಾಗ ಯಾವುದೇ ಬಾಂಬ್ ಕುರುಹುಗಳು ಪತ್ತೆಯಾಗದಿದ್ದಾಗ ಸುಳ್ಳು ಸಂದೇಶ ಎಂಬುದು ಗೊತ್ತಾಗಿದೆ. ಈ ಬಗ್ಗೆ ವಿಧಾನಸೌಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳಿಗಾಗಿ ಶೋಧ ಕೈಗೊಂಡಿದ್ದಾರೆ.

ರಾಜಕೀಯದ ಲಾಭಕ್ಕಾಗಿ ಬಿಜೆಪಿ ಹಿಂದುತ್ವದ ಚರ್ಚೆ ಮಾಡುತ್ತಿದೆ : ಸಚಿವ ಸಂತೋಷ್ ಲಾಡ್

ಕಬ್ಬನ್ ಪಾರ್ಕ್ : ಕಸ್ತೂರು ಬಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಕರೆಯಿಂದಾಗಿ ಕೆಲಕಾಲ ಆತಂಕ ಉಂಟಾಗಿತ್ತು. ಕಬ್ಬನ್‍ಪಾರ್ಕ್ ಠಾಣೆ ಪೊಲೀಸರು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ಇದು ಹುಸಿ ಕರೆ ಎಂಬುದು ತಿಳಿದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ಜ.3ರಂದು ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರಕ್ಕೆ ಬಾಂಬ್ ಇಡಲಾಗಿದೆ. ಅದು ಸ್ಪೋಟಗೊಳ್ಳಲಿದೆ ಎಂದು ಮುಂಬೈನ ಷೇರು ವಿನಿಮಯ ಕೇಂದ್ರಕ್ಕೆ ಕರೆ ಬಂದಿತ್ತು.

ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲಿಸಿದಾಗ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಕಳೆದ ಡಿಸೆಂಬರ್‍ನಲ್ಲಿ ದುಷ್ಕರ್ಮಿಗಳು ಬೆಂಗಳೂರು ಹಾಗೂ ಸುತ್ತಮುತ್ತಲಿನ 60 ಖಾಸಗಿ ಶಾಲೆಗಳಿಗೆ ಬಾಂಬ್ ಇಡಲಗಿದೆ. ಅದು ಸ್ಪೋಟಗೊಳ್ಳಲಿದೆ ಎಂದು ಇಮೇಲ್ ಸಂದೇಶ ಕಳುಹಿಸಿದ್ದರು. ಇದರಿಂದಾಗಿ ವಿದ್ಯಾರ್ಥಿಗಳು, ಪೊಷಕರು ಹಾಗು ಶಾಲಾ ಆಡಳಿತ ಮಂಡಳಿಗಳು ಆತಂಕಗೊಂಡಿದ್ದರು.

RELATED ARTICLES

Latest News