ಮಿಲನ ಪ್ರಕಾಶ್ ನಿರ್ದೇಶನ, ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಟ್ರೇಲರ್ ಅಲ್ಲಿ ದರ್ಶನ್ ಅವರು ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸ್ಟೈಲಿಶ್ ಲುಕ್, ಮಾಸ್ ಡೈಲಾಗ್ ಗಮನ ಸೆಳೆಯುವಂತಿದೆ.
ವಿಲನ್ ಶೇಡ್ನಲ್ಲಿ, ಪ್ಲೇ ಬಾಯ್ ಆಗಿ, ರೊಮ್ಯಾಂಟಿಕ್ ಆಗಿ ದರ್ಶನ್ ಹಲವು ರೀತಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಿಲೀಸ್ ಆದ ಹಾಡುಗಳು ಗಮನ ಸೆಳೆದಿವೆ. ಈಗ ಟ್ರೇಲರ್ ರಿಲೀಸ್ ಆಗಿದ್ದು ನಿರೀಕ್ಷೆ ಹೆಚ್ಚಿದೆ. ‘ಡೆವಿಲ್’ ಸಿನಿಮಾದಲ್ಲಿ ದರ್ಶನ್ಗೆ ಜೊತೆಯಾಗಿ ರಚನಾ ರೈ ನಟಿಸಿದ್ದಾರೆ. ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ಶರ್ಮಿಳಾ ಮಾಂಡ್ರೆ, ಶೋಭರಾಜ್ ಮೊದಲಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕೆ ಇದೆ. ಪ್ರಕಾಶ್ ಹಾಗೂ ಜಯಮ್ಮ ಚಿತ್ರ ನಿರ್ಮಿಸಿದ್ದಾರೆ.
ಡೆವಿಲ್ ಸಿನಿಮಾದಲ್ಲಿ ಡೈಲಾಗ್ ಗಳ ಸುರಿಮಳೆಯೇ ಸುರಿದಿದೆ. ‘ಸೂರ್ಯಂಗೆ ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ. ನಾನು ಬರ್ತಿದ್ದೀನಿ ಚಿನ್ನ’ ಎಂದು ದರ್ಶನ್ ಡೈಲಾಗ್ ಹೊಡೆದಿದ್ದಾರೆ. ಈ ಡೈಲಾಗ್ ನಿಜವಾಗಿ ಬಿಡ್ಲಿ ಅಂತ ಅಭಿಮಾನಿಗಳು ದೇವರಲ್ಲಿ ಕೇಳಿಕೊಳ್ತಾ ಇದ್ದಾರೆ. ಇನ್ನು ಬಿಗ್ ಬಾಸ್ ನಲ್ಲಿ ಪಂಚ್ ಡೈಲಾಗ್ ಹೊಡೆದು ಗಮನ ಸೆಳೆದಿರುವ ಗಿಲ್ಲಿ ಇಲ್ಲಿಯೂ ಪಂಚ್ ಡೈಲಾಗ್ ಹೊಡೆದಿದ್ದಾರೆ. ಪೊಲೀಸ್ ಅಧಿಕಾರಿ ಎದುರು ಬಂದು ಕುಳಿತು ‘ಎಕ್ಸ್ಕ್ಯೂಸ್ ಮೀ ಪಿಸಿ, ಸ್ವಲ್ಪ ಹಾಕಮ್ಮ ಎಸಿ. ಲಾಟ್ಸ್ ಆಫ್ ಸೆಖೆ’ ಎಂದು ಡೈಲಾಗ್ ಹೊಡೆಯುತ್ತಾರೆ.
ಶೋಭರಾಜ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡಗೂ ಚಿತ್ರದಲ್ಲಿ ಪಾತ್ರ ಸಿಕ್ಕಿದೆ. ದರ್ಶನ್ ಜೈಲಿನಲ್ಲಿ ಇರುವಾಗಲೇ ‘ಡೆವಿಲ್’ ಸಿನಿಮಾ ತೆರೆಗೆ ಬರುತ್ತಿದೆ. ಅಭಿಮಾನಿಗಳು ಹಾಗೂ ಕುಟುಂಬದವರು ಚಿತ್ರದ ಪ್ರಚಾರದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಒಳಿತಿನ ಪರವಾಗಿ ಹೋರಾಡುವ ವ್ಯಕ್ತಿಯಾಗಿಯೂ ಕೆಲವು ಪ್ರೇಂಗಳಲ್ಲಿ ನಟ ದರ್ಶನ್ ಕಾಣಿಸಿಕೊಂಡಿದ್ದು, ‘ಡೆವಿಲ್’ ಟ್ರೈಲರ್ನಲ್ಲಿ ಆಕ್ಷನ್, ಕಾಮಿಡಿ, ರೊಮ್ಯಾನ್ಸ್, ಪಾಲಿಟಿಕ್ಸ್, ರಿವೇಂಜ್ ಇನ್ನೂ ಕೆಲವು ಅಂಶಗಳು ನೋಡಲು ಸಿಗುತ್ತವೆ
