Friday, November 22, 2024
Homeರಾಜ್ಯಡಿಸಿಎಂ ಚರ್ಚೆ : ಹೈಕಮಾಂಡ್‌ಗೆ ಖಡಕ್ ಸಂದೇಶ ರವಾನಿಸಿದ ಡಿಕೆಶಿ

ಡಿಸಿಎಂ ಚರ್ಚೆ : ಹೈಕಮಾಂಡ್‌ಗೆ ಖಡಕ್ ಸಂದೇಶ ರವಾನಿಸಿದ ಡಿಕೆಶಿ

ಬೆಂಗಳೂರು,ಜ.9- ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿದ್ದೇ ಆದರೆ ತಾವು ಸಂಪುಟದಿಂದ ಹೊರಗಿರುವುದಾಗಿ ಹಾಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ರಾಜ್ಯದಲ್ಲಿ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಗೆ ಒತ್ತಡ ತೀವ್ರವಾದ ಬೆನ್ನಲ್ಲೇ 7 ಮಂದಿ ಸಚಿವರುಗಳು ರಹಸ್ಯ ಸಭೆ ನಡೆಸಿದ್ದರು. ಪ್ರತ್ಯೇಕ ಭೋಜನಾಕೂಟಗಳು ನಡೆದಿದ್ದವು. ಅಭಿಪ್ರಾಯ ಸಂಗ್ರಹಕ್ಕಾಗಿ ದೆಹಲಿಯಿಂದ ಆಗಮಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರ ಬಳಿಯೂ ಆಕಾಂಕ್ಷಿಗಳು ತಮ್ಮ ಬೇಡಿಕೆಯನ್ನು ಮಂಡಿಸಿದ್ದರು. ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸದೇ ಇದ್ದರೆ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂಬ ಸಂದೇಶವನ್ನು ರವಾನಿಸಿದ್ದರು.

ಅದರ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಹೈಕಮಾಂಡ್‍ಗೆ ತಮ್ಮ ನಿಲುವನ್ನು ತಿಳಿಸಿದ್ದು, ಪಕ್ಷಕ್ಕೆ ಅನುಕೂಲವಾಗುವುದಾದರೆ ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಸಿದ್ದೇ ಆದರೆ ತಾವು ಪ್ರಸ್ತುತ ಹುದ್ದೆಯಲ್ಲಿ ಮುಂದುವರೆಯುವುದಿಲ್ಲ. ಹೈಕಮಾಂಡ್ ಬಯಸುವುದಾದರೆ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುತ್ತೇನೆ. ಬೇಡ ಎಂದರೆ ಅದನ್ನೂ ತ್ಯಜಿಸಲು ಸಿದ್ಧ ಎಂದು ಖಡಕ್ ಸಂದೇಶ ನೀಡಿದ್ದಾರೆ. ಇದು ಹೈಕಮಾಂಡ್‍ಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಒಂದೆಡೆ ಜಾತಿವಾರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕು ಎಂಬ ಸೂಕ್ಷ್ಮ ವಿಚಾರವನ್ನು ತೇಲಿಬಿಟ್ಟು ಹಿರಿಯ ಕಾಂಗ್ರೆಸಿಗರು ಮುಜುಗರ ಉಂಟುಮಾಡಿದ್ದಾರೆ. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಣದ ಸಚಿವರೇ ಈ ತಂತ್ರಗಾರಿಕೆಯ ಹಿಂದೆ ಇರುವುದು ಮತ್ತಷ್ಟು ಕುತೂಹಲವನ್ನು ಕೆರಳಿಸಿದೆ. ಡಿ.ಕೆ.ಶಿವಕುಮಾರ್‍ರ ಪ್ರಭಾವವನ್ನು ತಗ್ಗಿಸುವುದು ಮತ್ತು ಲೋಕಸಭೆ ಚುನಾವಣೆಯ ಬಳಿಕ ಅಧಿಕಾರ ಹಂಚಿಕೆಯ ಬೇಡಿಕೆಗಳು ಮುನ್ನೆಲೆಗೆ ಬರದಂತೆ ನೋಡಿಕೊಳ್ಳಲು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಬೇಡಿಕೆಯನ್ನು ಪ್ರಸ್ತಾಪಿಸಲಾಗಿದೆ ಎಂಬ ಚರ್ಚೆಗಳಿವೆ.

ಲೋಕಸಭೆ ಚುನಾವಣೆ : 10 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಪ್ಲಾನ್

ಅದಕ್ಕೆ ಪೂರಕವೆಂಬಂತೆ ಹೆಚ್ಚುವರಿ ಉಪಮುಖ್ಯಮಂತ್ರಿಗಳ ವಿಚಾರವಾಗಿ ಪರ-ವಿರೋಧ ವಾಕ್ಸಮರಗಳು ಪಕ್ಷದಲ್ಲಿ ಸಣ್ಣ ಧ್ವನಿಯಾಗಿ ಕೇಳಿ ಬರುತ್ತಲೇ ಇವೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ರೀತಿಯ ಗೊಂದಲಗಳನ್ನು ತಡೆಹಿಡಿಯಲು ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಬೆಂಗಳೂರಿಗೆ ಕಳುಹಿಸಿದೆ. ಅವರು ನಿನ್ನೆ ಸಂಪುಟದ ಪ್ರಮುಖರ ಜೊತೆ ಚರ್ಚೆ ನಡೆಸಿದ್ದಾರೆ. ಅದರಲ್ಲಿ ಹೆಚ್ಚುವರಿ ಹುದ್ದೆಯ ಆಕಾಂಕ್ಷಿಗಳೊಂದಿಗೂ ಸಮಾಲೋಚನೆ ನಡೆಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಈ ರೀತಿಯ ಸೂಕ್ಷ್ಮ ವಿಚಾರಗಳು ಗೊಂದಲ ಸೃಷ್ಟಿಸಿದ್ದು ಹೈಕಮಾಂಡ್‍ಗೆ ಇಕ್ಕಟ್ಟಿಗೆ ಸಿಲುಕಿಸಿದಂತೆ ಮಾಡಿದೆ.

ಜಾತಿವಾರು ಅವಕಾಶ ನೀಡದೇ ಇದ್ದರೆ ಪಕ್ಷದ ಸಾಂಪ್ರದಾಯಿಕ ಮತ ಬ್ಯಾಂಕ್‍ಗಳು ಛಿದ್ರಗೊಳ್ಳುವ ಆತಂಕ ಒಂದು ಕಡೆಯಾಗಿದೆ. ಮತ್ತೊಂದು ಕಡೆ ಹೆಚ್ಚುವರಿ ಉಪಮುಖ್ಯಮಂತ್ರಿಗಳ ಹುದ್ದೆಯನ್ನು ಸೃಷ್ಟಿಸಿದರೆ ಡಿ.ಕೆ.ಶಿವಕುಮಾರ್ ಅವರ ಪ್ರಭಾವ ತಗ್ಗಲಿದೆ. ಸಹಜವಾಗಿ ಅವರ ಬೆಂಬಲಕ್ಕಿರುವ ದೊಡ್ಡ ಸಂಘಟನಾ ಪಡೆ ತಟಸ್ಥವಾಗಿ ಉಳಿಯುವ ಅಪಾಯವಿದೆ. ಲೋಕಸಭೆ ಚುನಾವಣೆಯ ಗೆಲುವಿನ ಶ್ರೇಯಸ್ಸು ಯಾರಿಗೆ ಎಂಬ ಚರ್ಚೆಗಳು ಮತ್ತು ಆಂತರಿಕ ಪೈಪೋಟಿ ಈಗಾಗಲೇ ಶುರುವಾಗಿದೆ.

ಸಾತ್ವಿಕ್-ಚಿರಾಗ್ ಜೋಡಿಗೆ ಲಭಿಸಿದ ಖೇಲ್‍ರತ್ನ ಪ್ರಶಸ್ತಿ

ವಿಧಾನಸಭೆ ಚುನಾವಣೆ ಗೆಲುವನ್ನು ಹೈಕಮಾಂಡ್ ಸಿದ್ದರಾಮಯ್ಯ ಅವರ ಹೆಗಲಿಗೆ ಕಟ್ಟಿ ಮುಖ್ಯಮಂತ್ರಿ ಹುದೆ ನೀಡಿದೆ. ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆದ್ದರೆ ಸಹಜವಾಗಿ ಅದರ ಕ್ರೆಡಿಟ್ ಅನ್ನು ಸಿದ್ದರಾಮಯ್ಯ ಅವರಿಗೇ ದೊರಕಿಸಲು ಪಕ್ಷದಲ್ಲಿ ಒಂದು ಬಣ ಹವಣಿಸುತ್ತಿದೆ. ಆದರೆ ಸಹಜವಾಗಿ ಪಕ್ಷದ ಆಧ್ಯಕ್ಷರ ಸಂಘಟನೆಯ ಚತುರತೆಗೆ ಗೆಲುವಿಗೆ ಕಾರಣ ಎಂಬ ವಾದಗಳಿವೆ. ಆದರೆ ವಿಧಾನಸಭೆ ಚುನಾವಣೆಯಲ್ಲಿ ಈ ವಾದಕ್ಕೆ ಹೆಚ್ಚು ಮನ್ನಣೆ ಸಿಗಲಿಲ್ಲ. ಹೀಗಾಗಿ ನಾನಾ, ನೀನಾ ಎಂಬ ಜಿದ್ದಾಜಿದ್ದಿನ ಪೈ ಪೋಟಿ ಒಳಗೊಳಗೇ ತೀವ್ರವಾಗಿದೆ.

ಈ ರೀತಿಯ ಅನಾರೋಗ್ಯಕರ ಪೈಪೋಟಿ ಹೆಚ್ಚಾಗಿ ಚುನಾವಣೆ ಮೇಲೆ ಪರಿಣಾಮ ಬೀಳಬಾರದು ಎಂಬ ಕಾರಣಕ್ಕಾಗಿ ಸಮನ್ವಯತೆಯನ್ನು ಸಾಸಲು ಹೈಕಮಾಂಡ್ ಹಲವು ಬಾರಿ ಪ್ರಯತ್ನಿಸಿದೆ. ಸುರ್ಜೆವಾಲ ಅವರ ನಿಯೋಗ ಈ ನಿಟ್ಟಿನಲ್ಲೇ ಗಂಭೀರ ಪ್ರಯತ್ನ ನಡೆಸಿದೆ ಎಂದು ತಿಳಿದುಬಂದಿದೆ.

RELATED ARTICLES

Latest News