ಬೆಂಗಳೂರು,ಜ.11- ರಾಜ್ಯಸರ್ಕಾರ ಉತ್ತಮ ಯೋಜನೆಗಳ ಆಧಾರವಾಗಿ ಲೋಕಸಭೆಯಲ್ಲಿ 28 ಕ್ಷೇತ್ರಗಳನ್ನು ಗೆಲ್ಲುವ ಗುರಿಯೊಂದಿಗೆ ಕೆಲಸ ಮಾಡುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಖಾತ್ರಿಗಳೂ ಸೇರಿದಂತೆ ಜನರ ಜೀವನ ಮಟ್ಟ ಸುಧಾರಣೆಗೆ ಕಾಂಗ್ರೆಸ್ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದು ಜನರ ಒಲವು ಗಳಿಸಲು ಯಶಸ್ವಿಯಾಗಿದೆ. ಅದನ್ನೇ ಆಧಾರವಾಗಿಟ್ಟುಕೊಂಡು ನಾವು ಚುನಾವಣೆ ನಡೆಸುತ್ತೇವೆ ಎಂದರು.
ನಿರುದ್ಯೋಗ ನಿವಾರಿಸುವಲ್ಲಿ ಮೋದಿ ವಿಫಲರಾಗಿದ್ದಾರೆ : ಜೈರಾಮ್
ಪಕ್ಷ ಸಂಘಟನೆಗೆ ನೆರವಾಗುವ ನಿಟ್ಟಿನಲ್ಲಿ ಪಂಚಖಾತ್ರಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರಚಿಸಲಾಗುತ್ತಿದೆ. ಈ ಮೂಲಕ ಸುಮಾರು 3 ಸಾವಿರ ಕಾರ್ಯಕರ್ತರನ್ನು ಒಳಗೊಳ್ಳಲಾಗುವುದು. ಶಾಸಕರ ಮಾದರಿಯಲ್ಲೇ ಕಾರ್ಯಕರ್ತರಿಗೂ ಅವಕಾಶಗಳು ದೊರೆಯಲಿವೆ ಎಂದು ಹೇಳಿದರು.
ಎಲ್ಲರಿಗೂ ಸಮಾನ ಅವಕಾಶಗಳು ದೊರೆಯುವಂತೆ ಒಟ್ಟಾಗಿ ಕೆಲಸ ಮಾಡಲು, ಚುನಾವಣೆ ಗೆಲ್ಲಲು ಸಹಾಯವಾಗಲಿದೆ ಎಂದರು. ಲೋಕಸಭೆ ಚುನಾವಣೆಯ ಪೂರ್ವ ತಯಾರಿ ಸಂಬಂಧಪಟ್ಟಂತೆ ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ತಾವು ಭಾಗವಹಿಸುತ್ತಿರುವುದಾಗಿ ತಿಳಿಸಿದರು.