Homeಅಂತಾರಾಷ್ಟ್ರೀಯಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಭಾರತೀಯನ ಬಂಧನ

ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಭಾರತೀಯನ ಬಂಧನ

Indian Living Illegally In US Arrested For Assaulting Man With Baseball Bat

ನ್ಯೂಯಾರ್ಕ್‌, ಮೇ 28- ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬರನ್ನು ಅಧಿಕಾರಿಗಳು ಬಂಧಿಸಿದ್ದಾರೆ.ಧವಲ್‌ ಅಮೃತಭಾಯಿ ಪಟೇಲ್‌ ಎಂಬಾತನನ್ನು ಕಳೆದ ಮೇ.16ರಂದು ಮ್ಯಾಸಚೂಸೆಟ್ಸ್ ರಾಜ್ಯದ ವೂಸ್ಟರ್‌ ಪೊಲೀಸ್‌‍ ಇಲಾಖೆ ಮೊದಲಿಗೆ ಬಂಧಿಸಿತ್ತು. ಇದೇ ವೇಳೆ ಅಪಾಯಕಾರಿ ಆಯುಧ ಬಳಸಿ ಹಲ್ಲೆ ಹಾಗೂ ಹಲ್ಲೆ ಯತ್ನ ಪ್ರಕರಣ ದಾಖಲಿಸಲಾಗಿತ್ತು.

ಪೊಲೀಸ್‌‍ ವರದಿ ಪ್ರಕಾರ, ಪಟೇಲ್‌ ಕೆಲಸ ಮಾಡುತ್ತಿದ್ದ ಮದ್ಯದಂಗಡಿಯಲ್ಲಿ ಗ್ರಾಹಕರೊಬ್ಬರೊಂದಿಗೆ ವಾಗ್ವಾದ ನಡೆದಿತ್ತು. ಈ ವಾಗ್ವಾದ ತೀವ್ರಗೊಂಡ ಬಳಿಕ ಪಟೇಲ್‌ ಬೇಸ್‌‍ಬಾಲ್‌‍ ಬ್ಯಾಟ್‌ ಹಿಡಿದು ಆ ವ್ಯಕ್ತಿಗೆ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.

ಆದರೆ, ಅಮೆರಿಕದ ಗೃಹ ಭದ್ರತಾ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಮ್ಯಾಸಚೂಸೆಟ್ಸ್ ನ ಸ್ಯಾಂಕ್ಚುವರಿ ರಾಜಕಾರಣಿಗಳು ಅಮೆರಿಕ ಇಮಿಗ್ರೇಶನ್‌ ಮತ್ತು ಕಸ್ಟಮ್ಸೌ ಎನ್‌ಫೋರ್ಸ್‌ಮೆಂಟ್‌‍ ಅಧಿಕಾರಿಗಳೊಂದಿಗೆ ಸಹಕರಿಸಲಿಲ್ಲ ಎಂದು ಆರೋಪಿಸಿದೆ. ಜೊತೆಗೆಗೆ ಯಾವುದೇ ಮಾಹಿತಿ ನೀಡದೇ ಪಟೇಲ್‌ನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದೆ.

ನಂತರ ಮೇ 18ರಂದು ಅಧಿಕಾರಿಗಳು ಪಟೇಲ್‌ನನ್ನು ಮತ್ತೆ ಬಂಧಿಸಿದ್ದಾರೆ. ಪಟೇಲ್‌ ಯಾವ ದಿನಾಂಕ ಮತ್ತು ಸಮಯದಲ್ಲಿ ಅಮೆರಿಕ ಪ್ರವೇಶಿಸಿದ್ದಾನೆ ಎಂಬುದು ತಿಳಿದಿಲ್ಲ. ಆತ ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದಾನೆ ಎಂದು ಹೇಳಿದೆ.

RELATED ARTICLES

Latest News