ಬೆಂಗಳೂರು, ಜ.11- ಇಬ್ಬರು ಸಾಫ್ಟ್‍ವೇರ್ ಎಂಜಿನಿಯರ್‍ಗಳು ಹಣದಾಸೆಗಾಗಿ ಮ್ಯಾಟ್ರೋಮೋನಿ ಹೆಸರಲ್ಲಿ ಆ್ಯಪ್ ತೆರೆದು ವೇಶ್ಯಾವಾಟಿಕೆ ನಡೆಸಿ ಪೊಲೀಸರಿಗೆ ಸಿಕ್ಕಿಬಿದ್ದು ಕಂಬಿ ಎಣಿಸುವಂತಾಗಿದೆ. ಒಬ್ಬ ಬೆಂಗಳೂರು, ಮತ್ತೊಬ್ಬ ತಮಿಳುನಾಡು ಮೂಲದ ಸಾಫ್ಟ್‍ವೇರ್ ಎಂಜಿನಿಯರ್‍ಗಳು ಈಗ ಜೈಲುಕಂಬಿ ಹಿಂದೆ ಇದ್ದಾರೆ.
ತಮಿಳುನಾಡು ಮೂಲದ ಟೆಕ್ಕಿ ಬಿಟೆಕ್ ಪದವೀಧರನಾಗಿದ್ದು, ಈತನ ಪರಿಚಯವಾಗಿ ಆತನ ಮಾತು ಕೇಳಿದ್ದಕ್ಕೆ ನಗರದ ಟೆಕ್ಕಿಯೂ ಜೈಲುಶಿಕ್ಷೆ ಅನುಭವಿಸುವಂತಾಗಿದೆ. ಸ್ಟಾಕ್ ಮಾರ್ಕೆಟ್‍ನಲ್ಲಿ ಹಣ ಹೂಡಿಕೆ ಮಾಡಿ ಕಳೆದುಕೊಂಡಿದ್ದ ಬೆಂಗಳೂರಿನ ಟೆಕ್ಕಿ ಲಕ್ಷಾಂತರ ಸಾಲ ಮಾಡಿಕೊಂಡಿದ್ದನು. ಹಾಗಾಗಿ ಸಾಫ್ಟ್‍ವೇರ್ ಕಂಪೆನಿಯ ಕೆಲಸಕ್ಕೆ ಗುಡ್‍ಬೈ ಹೇಳಿ ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿದ್ದರಿಂದ ಮ್ಯಾಟ್ರೋಮೋನಿ ಆ್ಯಪ್ ತೆರೆದು ಯುವಕ-ಯುವತಿಯರಿಗೆ ಮದುವೆ ಮಾಡಿಸುತ್ತಿದ್ದರು.
ಲೋಕಸಭೆ ಚುನಾವಣೆಯಲ್ಲಿ ಎಚ್‍ಡಿಕೆ ಸ್ಪರ್ಧೆಗೆ ಹೆಚ್ಚಿದ ಒತ್ತಡ
ಆ ಸಂದರ್ಭದಲ್ಲಿ ಮತ್ತೊಬ್ಬ ತಮಿಳುನಾಡು ಮೂಲದ ಸಾಫ್ಟ್‍ವೇರ್ ಎಂಜಿನಿಯರ್ ಈ ಆ್ಯಪ್‍ಗೆ ಭೇಟಿ ಮಾಡಿ ನಂತರ ಇಬ್ಬರೂ ಸಂಪರ್ಕಿಸಿದ್ದಾರೆ. ಮ್ಯಾಟ್ರೋಮೋನಿಯಿಂದ ಹೆಚ್ಚಿನ ಹಣ ಸಂಪಾದಿಸಲು ಆಗಲ್ಲ, ಹಾಗಾಗಿ ವೇಶ್ಯಾವಾಟಿಕೆ ನಡೆಸಿದರೆ ಹಣ ಗಳಿಸಬಹುದು. ಅದಕ್ಕಾಗಿ ವಿದೇಶಿ ಮಹಿಳೆಯರನ್ನು ಬಳಸಿಕೊಳ್ಳಬಹುದೆಂದು ಬಿಟೆಕ್ ಪದವೀಧರ ಹೇಳಿದ್ದಾನೆ.
ಆತನ ಮಾತನ್ನು ನಂಬಿ ಇಬ್ಬರೂ ಸೇರಿಕೊಂಡು ಹೈಟೆಕ್ ವೇಶ್ಯಾವಾಟಿಕೆ ಆರಂಭಿಸಿದ್ದಾರೆ. ಇತ್ತೀಚೆಗೆ ಹೊಟೇಲ್‍ವೊಂದರ ಮೇಲೆ ಹಲಸೂರು ಠಾಣೆ ಪೊಲೀಸರು ದಾಳಿ ಮಾಡಿದಾಗ ವಿದೇಶಿ ಮಹಿಳೇ ಹಾಗೂ ಇಬ್ಬರು ಟೆಕ್ಕಿಗಳು ಸೇರಿದಂತೆ 9 ಮಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಹಣದಾಸೆಗೆ ಈ ರೀತಿ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ.